ದಾರಿ ತಪ್ಪಿಸಿದ ಜಾಹೀರಾತು: ಮತ್ತೆ ಬಾಬಾ ರಾಮ್ ದೇವ್ ರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

ದಾರಿ ತಪ್ಪಿಸುವ ಜಾಹೀರಾತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಹ ಸಂಸ್ಥಾಪಕ ರಾಮ್‌ದೇವ್ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ “ನೀವು ಅಷ್ಟೊಂದು ಮುಗ್ಧರೇನಲ್ಲ” ಎಂದು ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪತಂಜಲಿ ಆಯುರ್ವೇದದ ಪ್ರವರ್ತಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣರ ಜೊತೆ ಸುಪ್ರೀಂ ಕೋರ್ಟ್ ಇಂದು ನೇರವಾಗಿ ಸಂವಾದ ನಡೆಸಿದೆ. “ಕೋವಿಡ್ ಸಂದರ್ಭದಲ್ಲಿ ದಾರಿ ತಪ್ಪಿಸುವ ಜಾಹೀರಾತು ನೀಡಿದ ಕಾರಣ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ನಾನು ಸಿದ್ಧ” ಎಂದು ರಾಮ್‌ದೇವ್ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.
“ನ್ಯಾಯಾಲಯದ ಆದೇಶದ ಹೊರತಾಗಿಯೂ, ನೀವು ಜಾಹೀರಾತು ಪ್ರಕಟಿಸಿ ಆ ವಿಷಯಗಳನ್ನು ಹೇಳಿದ್ದೀರಿ. ಆಯುರ್ವೇದವು ಮಹರ್ಷಿ ಚರಕರ ಕಾಲದಿಂದಲೂ ಇದೆ, ನಿಮ್ಮ ಸ್ವಂತ ವಿಧಾನವನ್ನು ಪ್ರಚಾರ ಮಾಡಲು ನೀವು ಇತರ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಏಕೆ ಕಳಪೆಯಾಗಿ ಮಾತನಾಡಿದ್ದೀರಿ” ಎಂದು ಕೋರ್ಟ್ ಪ್ರಶ್ನಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth