ಕರ್ತವ್ಯ ನಿರ್ಲಕ್ಷ್ಯ: ಸರ್ಕಾರಿ ಆಸ್ಪತ್ರೆಯ ಡೀನ್ ವರ್ಗಾವಣೆಗೆ ತಮಿಳುನಾಡು ಆರೋಗ್ಯ ಸಚಿವರ ಆದೇಶ - Mahanayaka

ಕರ್ತವ್ಯ ನಿರ್ಲಕ್ಷ್ಯ: ಸರ್ಕಾರಿ ಆಸ್ಪತ್ರೆಯ ಡೀನ್ ವರ್ಗಾವಣೆಗೆ ತಮಿಳುನಾಡು ಆರೋಗ್ಯ ಸಚಿವರ ಆದೇಶ

07/08/2024

ಆಸ್ಪತ್ರೆಯ ಅಸಮರ್ಪಕ ನಿರ್ವಹಣೆಗಾಗಿ ತಮಿಳುನಾಡಿನ ರಾಮನಾಥಪುರಂನ ಪರಮಕುಡಿ ಸರ್ಕಾರಿ ಆಸ್ಪತ್ರೆಯ ಡೀನ್ ಅವರನ್ನು ವರ್ಗಾಯಿಸಲು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯಂ ಆದೇಶಿಸಿದ್ದಾರೆ.
ಸುಬ್ರಮಣ್ಯಂ ಅವರು ತಮ್ಮ ದಿಢೀರ್ ತಪಾಸಣೆಯ ಭಾಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ರು. ಇದೇ ವೇಳೆ ಅದರ ಅಸಮರ್ಪಕ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯ ಸಿಟಿ ಸ್ಕ್ಯಾನ್ ಕೊಠಡಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಸಚಿವರು ಕಂಡುಕೊಂಡರು.
ಆಸ್ಪತ್ರೆಯ ವಿಸ್ತರಣೆಗಾಗಿ ನಿಯೋಜಿಸಲಾದ ಗುತ್ತಿಗೆದಾರರಿಗೆ ಕರೆ ಮಾಡಿದ ಅವರು, 18 ತಿಂಗಳು ಕಳೆದರೂ ಒಂದು ಮಹಡಿಯ ನಿರ್ಮಾಣವನ್ನು ಯಾಕೆ ಪೂರ್ಣಗೊಳಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಆಸ್ಪತ್ರೆಯೊಳಗಿನ ಕಲ್ಯಾಣ ಯೋಜನೆಯ ಪೋಸ್ಟರ್ ಗಳಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚಿತ್ರಗಳು ಇರುವುದನ್ನು ಕಂಡು ಸಚಿವರಿಗೆ ದೊಡ್ಡ ಆಘಾತವಾಯಿತು.

ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಸರ್ಕಾರದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ತಮಗೆ ತಿಳಿದಿದೆಯೇ ಎಂದು ಅವರು ಡೀನ್ ಅವರನ್ನು ಪ್ರಶ್ನಿಸಿದ್ದಾರೆ. ದಿವಂಗತ ಜಯಲಲಿತಾ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಎಐಎಡಿಎಂಕೆಯ ಮುಖ್ಯಸ್ಥರಾಗಿದ್ದರು. ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ನೇತೃತ್ವದ ಎಐಎಡಿಎಂಕೆಯ ಪ್ರತಿಸ್ಪರ್ಧಿ ಪಕ್ಷ ಡಿಎಂಕೆ ಚುನಾವಣೆಯಲ್ಲಿ ಗೆದ್ದು 2021ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ