ನ್ಯುಮೋನಿಯಾದಿಂದ ಬಳಲುತ್ತಿದ್ದ ಸಚಿವ ಕೊರೊನಾ ವೈರಸ್ ಗೆ ಬಲಿ - Mahanayaka

ನ್ಯುಮೋನಿಯಾದಿಂದ ಬಳಲುತ್ತಿದ್ದ ಸಚಿವ ಕೊರೊನಾ ವೈರಸ್ ಗೆ ಬಲಿ

01/11/2020


Provided by

ಚೆನ್ನೈ: ಕೊರೊನಾ ವೈರಸ್ ಸೋಂಕಿಗೆ ತಮಿಳುನಾಡಿನ ಕೃಷಿ ಸಚಿವ ಆರ್.ದೊರೈಕನ್ನು ಬಲಿಯಾಗಿದ್ದು, ಶನಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.


ಧನಿವಾರ ರಾತ್ರಿ ಸುಮಾರು 11:15ರ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  72 ವರ್ಷದ ಆರ್.ದೊರೈಕನ್ನುಅವರನ್ನು ಅನಾರೋಗ್ಯ ಹಿನ್ನೆಲೆಯಲ್ಲಿ ಅಕ್ಟೋಬರ್ 13ರಂದು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಇವರು ನ್ಯುಮೋನಿಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.  ಇವರು ಕೊವಿಡ್ ಸೋಂಕಿಗೆ ತುತ್ತಾದ ಬಳಿಕ ಮೊದಲು ವಿಳ್ಳುಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


2006, 2011 ಹಾಗೂ 2016ರಲ್ಲಿ ತಂಜಾವೂರಿನ ಪಾಪನಾಶಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ದೊರೈ ಅವರನ್ನು 2016ರಲ್ಲಿ ಜಯಲಲಿತಾ ಅವರು ಕ್ಯಾಬಿನೆಟ್ ಸಚಿವರನ್ನಾಗಿಸಿದ್ದರು.


 

ಇತ್ತೀಚಿನ ಸುದ್ದಿ