ಕನ್ನಡ ರಾಜ್ಯೋತ್ಸವದಂದೇ ಪ್ರತ್ಯೇಕ ರಾಜ್ಯದ ಕೂಗು | ಪ್ರತ್ಯೇಕ ಧ್ವಜ ಹಾರಾಟಕ್ಕೆ ಯತ್ನ - Mahanayaka
2:15 PM Saturday 2 - December 2023

ಕನ್ನಡ ರಾಜ್ಯೋತ್ಸವದಂದೇ ಪ್ರತ್ಯೇಕ ರಾಜ್ಯದ ಕೂಗು | ಪ್ರತ್ಯೇಕ ಧ್ವಜ ಹಾರಾಟಕ್ಕೆ ಯತ್ನ

01/11/2020

ಕಲಬುರಗಿ: ಕನ್ನಡ ರಾಜ್ಯೋತ್ಸವ ದಿನದಂದೇ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ,ಮ ಧ್ವಜಾರೋಹಣ ಮಾಡಲು ಯತ್ನಿಸಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Inside artilce ad


ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ರಾಜ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಪ್ರತಿಬಟನೆಯಲ್ಲಿ ಮಾತನಾಡಿದ  ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಬೋಳ್, ಕಲ್ಯಾಣ ಕರ್ನಾಟಕ ಹೆಸರಿನಿಂದ ಮಾತ್ರವೇ ಅಭಿವೃದ್ಧಿ ಆಗುವುದಿಲ್ಲ, ಕರ್ನಾಟಕ ಕಲ್ಯಾಣ ಪ್ರತ್ಯೇಕ ರಾಜ್ಯದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
Inside artilce ad


ಪ್ರತಿಭಟನೆ ಬಳಿಕ ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ್ದ ಹೋರಾಟ ಸಮಿತಿಯ 35 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Inside artilce ad


ಇತ್ತೀಚಿನ ಸುದ್ದಿ