ಫೇಸ್ ಬುಕ್ ಲೈವ್ ವೇಳೆ ಗುಂಡಿನ ದಾಳಿ: ಉದ್ಧವ್ ತಂಡದ ನಾಯಕ ಬಲಿ
ಫೇಸ್ ಬುಕ್ ಲೈವ್ ಸ್ಟ್ರೀಮ್ ಮಾಡುತ್ತಿದ್ದ ವೇಳೆ ಶಿವಸೇನೆ ನಾಯಕರೊಬ್ಬರ ಮೇಲೆ ಮುಂಬೈನ ದಹಿಸರ್ ಪ್ರದೇಶದಲ್ಲಿ ಗುರುವಾರ ಗುಂಡು ಹಾರಿಸಲಾಗಿದ್ದು ಇವರು ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಸೇನೆ (ಯುಬಿಟಿ) ಮುಖಂಡ ವಿನೋದ್ ಘೋಸಾಲ್ಕರ್ ಅವರ ಪುತ್ರ ಅಭಿಷೇಕ್ ಘೋಸಾಲ್ಕರ್ ಎಂಬಾತ ಮೌರಿಸ್ ನೊರೊನ್ಹಾ ಎಂಬಾತನೊಂದಿಗೆ ಫೇಸ್ ಬುಕ್ ಲೈವ್ ಮಾಡುತ್ತಿದ್ದರು.
ಮೌರಿಸ್ ಭಾಯ್ ನಂತರ ಲೈವ್ ಸ್ಟ್ರೀಮ್ ಅನ್ನು ತೊರೆದ ನಂತರ ಘೋಸಾಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ಮೌರಿಸ್ ಭಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಭಿಷೇಕ್ ಘೋಸಾಲ್ಕರ್ ಅವರನ್ನು ಕರುಣಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಭಿಷೇಕ್ ಘೋಸಾಲ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಮಾಜಿ ಕಾರ್ಪೊರೇಟರ್ ಆಗಿದ್ದಾರೆ. ಇತ್ತೀಚೆಗೆ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಅವರು ಶಿವಸೇನೆ ಮುಖಂಡ ಮಹೇಶ್ ಗಾಯಕ್ವಾಡ್ ಅವರನ್ನು ಮಹಾರಾಷ್ಟ್ರದ ಉಲ್ಹಾಸ್ ನಗರದಲ್ಲಿ ಹಿಲ್ ಲೈನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯ ಕ್ಯಾಬಿನ್ ಒಳಗೆ ಗುಂಡಿಕ್ಕಿ ಕೊಂದಿದ್ದರು. ಇಬ್ಬರು ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ದೀರ್ಘಕಾಲದ ಭೂ ವಿವಾದದ ಬಗ್ಗೆ ದೂರು ಸಲ್ಲಿಸಲು ಒಟ್ಟುಗೂಡಿದ್ದರು. ಘಟನೆಯಲ್ಲಿ ಶಿವಸೇನೆ ಶಾಸಕ ರಾಹುಲ್ ಪಾಟೀಲ್ ಕೂಡ ಗಾಯಗೊಂಡಿದ್ದಾರೆ.