ಕಾಪಿನಾಡಿಗೆ ಪ್ರವಾಸಕ್ಕೆ ಬಂದಿದ್ದ  ಟೆಕ್ಕಿ ಜಲಪಾತದಲ್ಲಿ ಮುಳುಗಿ ಸಾವು - Mahanayaka
4:53 PM Thursday 12 - December 2024

ಕಾಪಿನಾಡಿಗೆ ಪ್ರವಾಸಕ್ಕೆ ಬಂದಿದ್ದ  ಟೆಕ್ಕಿ ಜಲಪಾತದಲ್ಲಿ ಮುಳುಗಿ ಸಾವು

chikkamagaluru
04/11/2024

ಚಿಕ್ಕಮಗಳೂರು : ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಟೆಕ್ಕಿ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಜಲಪಾತದಲ್ಲಿ ನಡೆದಿದೆ.

ಮೃತನನ್ನು  ಛತ್ತೀಸ್ ಘಡ ಮೂಲದ ಅಮಿತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಮೃತ ಅಮಿತ್ ಸಲಾಂ ಕರೀಂ ಎಂಬ ಸ್ನೇಹಿತನ ಜೊತೆ  ಮೂರು ದಿನಗಳ ಹಿಂದೆ ಕಾಫಿನಾಡಿಗೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.

ಮೃತ ವ್ಯಕ್ತಿ ಹಾಗೂ ಸಲಾಂ ಕರೀಂ  ಬೆಂಗಳೂರಿನಲ್ಲಿ ಒಂದೇ ರೂಂನಲ್ಲಿದ್ದು, ಬೇರೆ–ಬೇರೆ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಘಟನೆ ಸಂಬಂಧಿಸಿದಂತೆ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ