ರಾಹುಲ್ ಗಾಂಧಿ ಧರ್ಮ, ಜಾತಿಯನ್ನು ಪ್ರಶ್ನಿಸಿದ ತೆಲಂಗಾಣ ಬಿಜೆಪಿ ಶಾಸಕ: ಕಾಂಗ್ರೆಸ್ ತಿರುಗೇಟು
ಜಾತಿ ಸಮೀಕ್ಷೆಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳನ್ನು ವಂಚಿಸಲು ಪ್ರಯತ್ನಿಸುತ್ತಿದೆ ಎಂದು ತೆಲಂಗಾಣ ಬಿಜೆಪಿ ಶಾಸಕ ಎ ಮಹೇಶ್ವರ ರೆಡ್ಡಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ಜಾತಿ ಮತ್ತು ಧರ್ಮವನ್ನು ಪ್ರಶ್ನಿಸುವ ಮೂಲಕ ಶಾಸಕರು ವಿವಾದವನ್ನು ಹುಟ್ಟುಹಾಕಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಶಾಸಕರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಬಿ.ಮಹೇಶ್ ಕುಮಾರ್ ಗೌಡ್, ಮಹೇಶ್ವರ ರೆಡ್ಡಿ ಅವರು ಕಾಂಗ್ರೆಸ್ ನಲ್ಲಿದ್ದಾಗ ಅವರ ಜಾತಿಯ ಬಗ್ಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಬಿಜೆಪಿ ನಾಯಕ ಮಹೇಶ್ವರ ರೆಡ್ಡಿ, “ಜಾತಿ ಜನಗಣತಿಯ ಬಗ್ಗೆ ಮಾತನಾಡುವ ಗಾಂಧಿಯವರ ಜಾತಿ ಮತ್ತು ಧರ್ಮವನ್ನು ಮೊದಲು ತಿಳಿದುಕೊಳ್ಳಬೇಕು” ಎಂದು ಹೇಳಿದರು.
ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ರಾಹುಲ್ ಗಾಂಧಿ ಅವರ ತಿಳುವಳಿಕೆಯ ಬಗ್ಗೆಯೂ ಅವರು ಕೇಳಿದ್ದಾರೆ.
ರಾಹುಲ್ ಗಾಂಧಿ ಅಜ್ಜ ಯಾರು? ಫಿರೋಜ್ ಜಹಾಂಗೀರ್ ಘಂಡಿ . (ಅವರು) ಫಿರೋಜ್ ಜಹಾಂಗೀರ್ ಅವರ ಮೊಮ್ಮಗ. ಹಿಂದೂ ಸಂಪ್ರದಾಯದಲ್ಲಿ ತಂದೆಗೆ ಅಜ್ಜನ ಜಾತಿ ಮತ್ತು ಮಗನಿಗೆ ತಂದೆಯ ಜಾತಿ ಸಿಗುತ್ತದೆ” ಎಂದು ಬಿಜೆಪಿ ಶಾಸಕ ಹೇಳಿದರು.
“ನನ್ನ ಪ್ರಕಾರ ಫಿರೋಜ್ ಜಹಾಂಗೀರ್ ಅವರ ಮಗ ರಾಜೀವ್ ಜಹಾಂಗೀರ್ ಆಗಿರಬೇಕು. ರಾಜೀವ್ ಜಹಾಂಗೀರ್ ಅವರ ಮಗ ರಾಹುಲ್ ಜಹಾಂಗೀರ್ ಆಗಿರಬೇಕು. ಅವರು ತಮ್ಮ ಜಾತಿ ಮತ್ತು ಧರ್ಮ ಏನು ಎಂದು ಹೇಳಬೇಕಾಗಿದೆ” ಎಂದು ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj