ಮಾಲಿಕನ ತಮ್ಮನ ಮನೆಗೆ ಕನ್ನ ಹಾಕಿದ್ದ‌ ಮೂವರ ಬಂಧನ - Mahanayaka

ಮಾಲಿಕನ ತಮ್ಮನ ಮನೆಗೆ ಕನ್ನ ಹಾಕಿದ್ದ‌ ಮೂವರ ಬಂಧನ

chamarajanagara
04/02/2023

ಚಾಮರಾಜನಗರ: ಕೊಳ್ಳೇಗಾಲದ ಶ್ರೀ ಬಸವೇಶ್ವರ ನಗರದ ನಿವಾಸಿ ಹಾಗೂ ದತ್ತ ಮೆಡಿಕಲ್ ಮಾಲೀಕ ವಿನಯ್ ಅವರ ಮನೆಯಲ್ಲಿ ಕಿಟಕಿ ಸರಳನ್ನು ಜ.18 ರಂದು ಕತ್ತರಿಸಿ ಒಳ ನುಗ್ಗಿ 513 ಗ್ರಾಂ ಚಿನ್ನಾಭರಣ ಹಾಗೂ 49 ಸಾವಿರ ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ‌ ತಾಲ್ಲೂಕಿನ ಕಾಮಗೆರೆ ಗ್ರಾಮದ ಭರತ್, ಗುಂಡ್ಲಪೇಟೆಯ ಕಾವ್ಯ, ಮೈಸೂರಿನ ಲೋಹಿತ್ ಕುಮಾರ್ ಬಂಧಿತ ಆರೋಪಿಗಳು.

ದತ್ತ ಮೆಡಿಕಲ್ ಮಾಲೀಕ ವಿನಯ್ ಅವರು ಭಾವನ ಮನೆ ಶಿವಮೊಗ್ಗಕ್ಕೆ ಹೋಗಿದ್ದ ವೇಳೆ ವಿನಯ್ ಅವರ ಹಿರಿಯ ಸಹೋದರ ನಾಗರಾಜು ಬಾಬು ಅವರ ಮತ್ತೊಂದು ಮೆಡಿಕಲ್ ಅಂಗಡಿಯಲ್ಲಿ 10 ವರ್ಷದಿಂದ ನಂಬಿಕಸ್ಥ  ನೌಕರರಾಗಿ  ಕೆಲಸ ಮಾಡುತ್ತಿದ್ದ ಭರತ್ ಎಂಬಾತ ಮನೆಗೆ ಕನ್ನ ಹಾಕಿ ಪ್ರೇಯಸಿಗೆ ಚಿನ್ನಾಭರಣ ಕೊಟ್ಟಿದ್ದ, ಇವರಿಗೆ   ಲೋಹಿತ್ ಕುಮಾರ್ ಸಹ ಕೈ ಜೋಡಿಸಿದ್ದ ಕಾರಣ  ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 513 ಗ್ರಾಂ ಚಿನ್ನಾಭರಣ, 20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

 

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ