ಫ್ರೀಡಂ ಆ್ಯಪ್ ವಿರುದ್ಧ ಸಿಡಿದೆದ್ದ ನೌಕರರು: ಲಕ್ಷ ಲಕ್ಷ ಹಣದ ಆಸೆ ತೋರಿಸಿ ಮೋಸ ಮಾಡಿದ ಆರೋಪ - Mahanayaka

ಫ್ರೀಡಂ ಆ್ಯಪ್ ವಿರುದ್ಧ ಸಿಡಿದೆದ್ದ ನೌಕರರು: ಲಕ್ಷ ಲಕ್ಷ ಹಣದ ಆಸೆ ತೋರಿಸಿ ಮೋಸ ಮಾಡಿದ ಆರೋಪ

freedom app
05/02/2023

ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳಲ್ಲಿ ಪದೇ ಪದೇ ಫ್ರೀಡಂ ಆ್ಯಪ್  ಜಾಹೀರಾತು  ನೀವು ನೋಡಿರಬಹುದು ಆದ್ರೆ, ಇದೀಗ ಈ ಫ್ರೀಡಂ ಆ್ಯಪ್ ವಿರುದ್ಧ ಕಂಪೆನಿಯ ನೌಕರರು ತಿರುಗಿ ಬಿದ್ದಿದ್ದು, ಕೆಲಸದ ಆಮಿಷ ನೀಡಿ ನಮಗೆ ಮೋಸ ಮಾಡಲಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬನಶಂಕರಿ ಪೊಲೀಸ್ ಠಾಣೆ ಹಾಗೂ ಬಿಟಿಎಂ ಪೊಲೀಸ್ ಠಾಣೆಗೆ ಕಂಪೆನಿಯ ನೌಕರರು ದೂರು ನೀಡಿದ್ದಾರೆ. ಕಂಪೆನಿ ವಿರುದ್ಧ ಎಫ್ ಐ ಆರ್ ದಾಖಲಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದು ‘ವಿಜಯ ಟೈಮ್ಸ್’ ವರದಿ ಮಾಡಿದೆ.

ಈ ಕೆಲಸ ನಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದೆ ಎಂದು ನೌಕರರು ಆರೋಪಿಸಿದ್ದು, ನಮ್ಮ ಕೈಯಿಂದಲೇ ಹಣ ಹಾಕಿಸಿಕೊಂಡು ಕೆಲಸ ಮಾಡಿಸಿಕೊಂಡು ಮೋಸ ಮಾಡಲಾಗುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.

ನೌಕರರಿಗೆ ಲಕ್ಷ ಲಕ್ಷ ಹಣ ಗಳಿಸುವ ಆಸೆ ತೋರಿಸಿ ಯಾಮಾರಿಸುತ್ತಾರೆ. ಆಫೀಸ್ ನೊಳಗೆ ಯಾರ ಜೊತೆಗೂ ಮಾತನಾಡುವಂತಿಲ್ಲ, ಕ್ಲೋಸ್ ಆಗಿ ಇರುವಂತಿಲ್ಲ, ಫ್ರೆಂಡ್ ಶಿಪ್ ಮಾಡುವಂತಿಲ್ಲ ಎಂದು ನೌಕರರು ಆರೋಪಿಸಿದ್ದಾರೆ.

60ರಿಂದ 90 ಸಾವಿರ ಹಣದವರೆಗೆ ಸಂಪಾದಿಸಬಹುದು ಎಂದು ಸುಳ್ಳ ಮಾಹಿತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಆದರೆ 25 ಸಾವಿರ ಕೂಡ ನಮ್ಮ ಕೈಗೆ ಬರುವುದಿಲ್ಲ. ಸುಳ್ಳು ಹಾಗೂ ಮೋಸದ ಮಾಹಿತಿ ನೀಡಿ ಯುವಕರ ಜೀವನ ಹಾಳು ಮಾಡುತ್ತಿದ್ದಾರೆ ಎಂದು ಯುವಕರು ದೂರಿದ್ದಾರೆ.

ಫ್ರೀಡಂ ಆ್ಯಪ್ ಬಗ್ಗೆ ಅದರ ನೌಕರರು ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಸುಧೀರ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದು, ಕೆಲವರು ಒಂದು ವಾರ 6 ದಿನ 8 ದಿನ ಕೆಲಸ ಮಾಡಿ, ಈಗ ಕೆಲಸ ಕಷ್ಟ ಕೆಲಸ ಮಾಡಲು ಆಗುವುದಿಲ್ಲ, ಫುಲ್ ಟೈಮ್ ಕೆಲಸ ಮಾಡಲು ಆಗುವುದಿಲ್ಲ, ನಮ್ ತಂದೆಗೆ ಹುಷಾರಿಲ್ಲ ಎಂದು ಹೋಗಿದ್ದಾರೆ. ಆ ಬಳಿಕ ಇದೀಗ ನಾವು ಹಣ ಹಾಕಿದ್ದಾರೆ ಎನ್ನುತ್ತಿದ್ದಾರೆ.  ಅಭ್ಯರ್ಥಿಗಳು ಕೈಯಿಂದ ಹಣ ಹಾಕಿ ಕೆಲಸ ಮಾಡಲು ನಮ್ಮ ತಂಡ ಪ್ರಚೋದನೆ ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಆ ರೀತಿಯಾಗಿ ಯಾರಾದ್ರೂ ನಮ್ಮವರು ಹಣ ಪಡೆದುಕೊಂಡಿರುವ ಬಗ್ಗೆ ನಮಗೆ ಒಂದು ಸಾಕ್ಷಿ ನೀಡಿದರೆ, ಅವರ ಅಕೌಂಟ್ ನಿಂದಲೇ ನಿಮಗೆ ಹಣ ವಾಪಸ್ ಬರುತ್ತದೆ.  ಅಲ್ಲದೇ ಕೋರ್ಟ್ ಗೆ ಹೋಗುತ್ತೇವೆ ಎಂದರೆ ಹೋಗಿ, ನಮ್ಮಲ್ಲಿ ತಪ್ಪಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ