ಹಿಂದೂ ಮತ್ತು ಹಿಂದುತ್ವಕ್ಕೂ ಯಾವುದೇ ವ್ಯತ್ಯಾಸ ಇಲ್ಲ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿಕೆ - Mahanayaka

ಹಿಂದೂ ಮತ್ತು ಹಿಂದುತ್ವಕ್ಕೂ ಯಾವುದೇ ವ್ಯತ್ಯಾಸ ಇಲ್ಲ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿಕೆ

n mahesh
06/02/2023

ಚಾಮರಾಜನಗರ: ಹಿಂದೂ ಬೇರೆ ಹಿಂದುತ್ವ ಬೇರೆ ಎನ್ನುವ ವಾದವೇ ಸರಿಯಿಲ್ಲ, ಆ ಮಾತನ್ನು ಒಪ್ಪಲಾಗಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಅವರ ಹಿಂದೂ ಬೇರೆ ಹಿಂದುತ್ವ ಬೇರೆ ಎಂಬ ಮಾತು ಸರಿಯಲ್ಲ, ಯಾರು ಹಿಂದೂ ಧರ್ಮದ ತತ್ವಗಳು ಪಾಲನೆ ಮಾಡುತ್ತಾರೋ‌ ಆತ ಹಿಂದೂ, ಹಿಂದುತ್ವ ಪಾಲನೆ ಮಾಡುವನು ಹಿಂದೂ, ಹಿಂದೂ-ಹಿಂದುತ್ವ ಬೇರೆಯಲ್ಲ ಎಂದು ಸಿದ್ದು ಹೇಳಿಕೆಗೆ ತಿರುಗೇಟು ಕೊಟ್ಟರು.

ನಾನು ಓರ್ವ ಬುದ್ಧಿಸ್ಟ್, ಬೌದ್ಧ ಧರ್ಮದ ತತ್ವ ಅಂದರೆ ಬೌದ್ಧತ್ವ ಪಾಲನೆ ಮಾಡುವನು ಬೌದ್ಧ ಆಗುತ್ತಾನೆ, ಅದೇ ರೀತಿ ಹಿಂದುತ್ವ ಪಾಲನೆ ಮಾಡುವನು ಹಿಂದೂ ಆಗ್ತಾನೆ ಎಂದು ತಿಳಿಸಿದರು.

ಇದೇ ವೇಳೆ, ಬ್ರಾಹ್ಮಣ ಸಿಎಂ ಆಗ್ತಾರೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರೇನು ನಮ್ಮ ಹೈಕಮಾಂಡ್ ಅಲ್ಲ,ಯಾರನ್ನು ಸಿಎಂ ಮಾಡಬೇಕೆಂದು ಪಕ್ಷ ನಿರ್ಧರಿಸುತ್ತಿದೆ, ನಮ್ಮ ಹೈಕಮಾಂಡ್ ಸ್ಟ್ರಾಂಗ್ ಆಗಿದೆ, ಸೆನ್ಸಿಟಿವ್ ಆಗಿದೆ ಅವರು ತೀರ್ಮಾನ ಮಾಡ್ತಾರೆ, ಸಿಎಂ ಯಾರನ್ನು ಮಾಡಬೇಕೆಂಬುದು ಜೆಡಿಎಸ್ ತೀರ್ಮಾನವಲ್ಲ, ಕುಮಾರಸ್ವಾಮಿ ನಿರ್ಧರಿಸಲ್ಲ ಎಂದು ಎಚ್ ಡಿಕೆಗೆ ಹೇಳಿಕೆಗೆ ಕುಟುಕಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ