ತಪ್ಪಿದ ದೊಡ್ಡ ಮಟ್ಟದ ಅನಾಹುತ ರಸ್ತೆ ಬಿಟ್ಟು  ಗದ್ದೆಗೆ ನುಗ್ಗಿದ ಬಸ್ಸು - Mahanayaka

ತಪ್ಪಿದ ದೊಡ್ಡ ಮಟ್ಟದ ಅನಾಹುತ ರಸ್ತೆ ಬಿಟ್ಟು  ಗದ್ದೆಗೆ ನುಗ್ಗಿದ ಬಸ್ಸು

bidar bus
04/08/2024

ಔರಾದ್: ಬೀದರನಿಂದ ಔರಾದ್ ತಾಲೂಕಿನ ಕರಂಜಿ ಗ್ರಾಮದ ಕಡೆಗೆ ತೆರಳುತ್ತಿದ್ದ  ಬಸ್ಸೊಂದು  ಕಿರಿದಾದ ರಸ್ತೆಯ ವೈಫಲ್ಯದಿಂದ ರಸ್ತೆಬಿಟ್ಟು ಕೆಳಗೆ ಇಳಿದ ಘಟನೆ ವಡಗಾಂವ (ದೇ)-ಬೇಲೂರ್ ಗ್ರಾಮದ ಬಳಿ ನಡೆದಿದೆ. ಸಾಯಂಕಾಲ ಆಗಿರುವ ಕಾರಣದಿಂದ ಹೆಚ್ಚಿನವರು ಕರ್ತವ್ಯದಿಂದ ತೆರಳುವವರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದರು.

ಎದುರಿನಿಂದ ಕ್ರೂಸರ್ ಬಂದಿರುವ ಕಾರಣ ಹಾಗೂ ಮಳೆಯಿಂದ ಟೈರ್ ಗಳು ಹಸಿಯಾದ ಕಾರಣ ರಸ್ತೆಯಿಂದ ಜಾರಿ ಕೆಳಗೆ ಇಳಿದಿದೆ. ಅಲ್ಲದೇ ರಸ್ತೆಯೂ ಕಿರಿದಾಗಿದೆ ಎಂದು ಚಾಲಕ ಎಡಿಸನ್ ತಿಳಿಸಿದ್ದಾರೆ.

ಬಸ್ ನಲ್ಲಿ ಸುಮಾರು 32 ಜನ ಪ್ರಯಾಣಿಸುತ್ತಿದ್ದರು. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಬೀದರ ಘಟಕ 1ರ ವ್ಯವಸ್ಥಾಪಕರು ತಿಳಿಸಿದ್ದಾರೆ. ಬಸ್ ರಸ್ತೆಯ ಕೆಳಗೆ ಇಳಿಯುತ್ತಿದಂತೆ  ಚಾಲಕ -ನಿರ್ವಾಹಕ ಬಸ್ ನಲ್ಲಿರುವ ಎಲ್ಲ ಪ್ರಯಾಣಿಕರಿಗೆ ಕೆಳಗಿಸಿದರು. ನಂತರ ಬಸ್ ರಸ್ತೆಯ ಮೇಲೆ ತೆಗೆದು ಪ್ರಯಾಣಿಕರಿಗೆ ಸುರಕ್ಷಿತವಾಗಿ ಗ್ರಾಮಗಳಿಗೆ ತಲುಪಿಸಿದರು.

ಜನರ ಆಕ್ರೋಶ : ಬೀದರ ಘಟಕದಿಂದ ಔರಾದ್ ತಾಲೂಕಿನಲ್ಲಿ‌ ಸಂಚರಿಸುವ ಬಹುತೇಕ ಬಸ್ ಗಳು ಗುಜರಿ ಹಾಕುವ ಬಸ್ ಗಳಾಗಿವೆ. ಆದ್ದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಕುಡಲೇ ಇಲಾಖೆ ಎಚ್ಚತ್ತುಕೊಂಡ ಹೊಸ ಹಾಗೂ ಗುಣಮಟ್ಟದ ಬಸ್ ಗಳನ್ನು ಓಡಿಸಬೇಕು ಎಂದು ವಡಗಾಂವ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ: ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ