ವರದಕ್ಷಿಣೆ ತರಲಿಲ್ಲ ಎಂದ ಪತ್ನಿಗೆ ತಲಾಖ್ ಕೊಟ್ಟ ಪತಿ | ಮುಸ್ಲಿಮರಲ್ಲಿ ಹೆಣ್ಣು ಹೆತ್ತವರ ಗಂಟಲು ಹಿಸುಕುತ್ತಿದೆ ವರದಕ್ಷಿಣೆ! - Mahanayaka

ವರದಕ್ಷಿಣೆ ತರಲಿಲ್ಲ ಎಂದ ಪತ್ನಿಗೆ ತಲಾಖ್ ಕೊಟ್ಟ ಪತಿ | ಮುಸ್ಲಿಮರಲ್ಲಿ ಹೆಣ್ಣು ಹೆತ್ತವರ ಗಂಟಲು ಹಿಸುಕುತ್ತಿದೆ ವರದಕ್ಷಿಣೆ!

27/10/2020

ಬೆಂಗಳೂರು: ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕಾಗಿ ಪತಿಯು ಮಹಿಳೆಗೆ ಕಿರುಕುಳ ನೀಡಿ ತಲಾಖ್ ನೀಡಿರುವ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜಪೇಟೆ ನಿವಾಸಿ ಮಹಿಳೆ ತನ್ನ ಪತಿಯ ಕೃತ್ಯದ ವಿರುದ್ಧ ದೂರು ನೀಡಿದ್ದಾರೆ. ಪತಿ ಸಯ್ಯದ್ ಅಜ್ಮಲ್  ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲಾಗಿದೆ. ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಆದರೂ ಪತಿ ದಿನನಿತ್ಯವೂ ಕಿರುಕುಳ ನೀಡುತ್ತಿದ್ದು, ಗರ್ಭಿಣಿಯಾಗಿದ್ದ ಸಂದರ್ಭದಲ್ಲಿಯೂ, ವರದಕ್ಷಿಣೆ ತರಲಿಲ್ಲ ಎಂದು ಊಟ ನೀಡದೆಯೂ ಮಹಿಳೆಯನ್ನು ಪೀಡಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.


ಈತನ ಕಿರುಕುಳ ಸಹಿಸಲಾಗದೇ ಮಹಿಳೆಯು ನಿಮಾನ್ಸ್ ನಲ್ಲಿಯೂ ಚಿಕಿತ್ಸೆ ಪಡೆದುಕೊಂಡಿದ್ದರಂತೆ. ಆದರೆ ಇದೀಗ ವರದಕ್ಷಿಣೆಯ ಕಾರಣಕ್ಕಾಗಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ಇಸ್ಲಾಮ್ ನಲ್ಲಿ ವರದಕ್ಷಿಣೆ ಎಂಬ ಪಿಡುಗು ಅಮಾಯಕ ಹೆಣ್ಣುಮಕ್ಕಳ ಜೀವನವನ್ನು ಕಿತ್ತು ತಿನ್ನುತ್ತಿದೆ. ಪರಾರಂಪರಿಕವಾಗಿ ಈ ವರದಕ್ಷಿಣೆಯ ಪಿಡುಗು ಮುಂದುವರಿಯುತ್ತಲೇ ಇದೆ. ಈ ಬಗ್ಗೆ ಮುಸ್ಲಿ,ಮರ ವಿವಿಧ ಸಂಘಟನೆಗಳು ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ, ಇದು ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಮಂಗಳೂರಿನಂತಹ ಪ್ರದೇಶಗಳಲ್ಲಿ ವರದಕ್ಷಿಣೆ ಎನ್ನುವುದು ಹೆಣ್ಣು ಹೆತ್ತವರ ಗಂಟಲು ಹಿಸುಕುತ್ತಲೇ ಇದೆ.


Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ