ಸ್ಟ್ರಾಂಗ್ ರೂಮ್ ಕೀ ಮನೆಯಲ್ಲಿ ಬಿಟ್ಟು ಬಂದ ಅಧಿಕಾರಿ! - Mahanayaka

ಸ್ಟ್ರಾಂಗ್ ರೂಮ್ ಕೀ ಮನೆಯಲ್ಲಿ ಬಿಟ್ಟು ಬಂದ ಅಧಿಕಾರಿ!

vijayapura
04/06/2024

ವಿಜಯಪುರ: ಲೋಕಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆ ಆರಂಭಗೊಂಡಿದೆ. ಫಲಿತಾಂಶ ಕೆಲವೇ ಹೊತ್ತಿನಲ್ಲಿ ಪ್ರಕಟವಾಗಲಿದೆ. ಇದೇ ವೇಳೆ ವಿಜಯಪುರದಲ್ಲಿ ತಡವಾಗಿ ಸ್ಟ್ರಾಂಗ್ ರೂಮ್ ತೆರೆದಿರುವುದು ಬೆಳಕಿಗೆ ಬಂದಿದೆ.


Provided by

ಎಲ್ಲಾ ಕಡೆಗಳಲ್ಲಿ ಸರಿಯಾದ ಸಮಯಕ್ಕೆ ಸ್ಟ್ರಾಂಗ್ ರೂಮ್ ಗಳು ಓಪನ್ ಆಗಿದ್ದು ಅಂಚೆ ಮತ ಎಣಿಕೆ ಕೂಡ ಆರಂಭವಾಗಿದೆ. ಆದರೆ ವಿಜಯಪುರದಲ್ಲಿ ಅಧಿಕಾರಿ ಸ್ಟ್ರಾಂಗ್ ರೂಮ್ ​ನ ಬೀಗದ ಕೈ ಮನೆಯಲ್ಲೇ ಮರೆತು ಬಂದಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್​ ನ ಬೀಗದ ಕೈಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು ಎನ್ನಲಾಗಿದೆ.

ಲಾಕ್ ಓಪನ್ ಮಾಡಲು ಹೋದಾಗ ತಮ್ಮ ಬಳಿ ಕೀ ಇಲ್ಲದಿರುವುದು ತಿಳಿದುಬಂದಿದೆ. ತಕ್ಷಣವೇ ಶರೀಫ್ ತಮ್ಮ ಮನೆಗೆ ಹಿಂದಿರುಗಿದ್ದು ಕೀ ತಂದು ಈಗ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ