ಶಾಕಿಂಗ್!! ಚಲಿಸುತ್ತಿದ್ದ ಬಸ್ ಗೆ ಹಾರಿ ವ್ಯಕ್ತಿ ಸಾವಿಗೆ ಶರಣು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Mahanayaka

ಶಾಕಿಂಗ್!! ಚಲಿಸುತ್ತಿದ್ದ ಬಸ್ ಗೆ ಹಾರಿ ವ್ಯಕ್ತಿ ಸಾವಿಗೆ ಶರಣು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

chamarajanagar 2
16/11/2023

ಚಾಮರಾಜನಗರ: ಚಲಿಸುತ್ತಿದ್ದ ಬಸ್ ಗೆ ವ್ಯಕ್ತಿಯೋರ್ವ ಹಾರಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ಚಾಮರಾಜನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ಚಾಮರಾಜನಗರ ತಾಲೂಕಿನ ಯಾಲಕ್ಕೂರು ಗ್ರಾಮದ ರಂಗಸ್ವಾಮಿ(34) ಮೃತ ದುರ್ದೈವಿ. ಚಾಮರಾಜನಗರ ಬಸ್ ನಿಲ್ದಾಣದಿಂದ ಮೈಸೂರಿನತ್ತ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ರಂಗಸ್ವಾಮಿ ಹಿಂಬದಿ ಚಕ್ರಕ್ಕೆ ಹಾರಿದ್ದಾನೆ. ಇದನ್ನು ಚಾಲಕ ಗಮನಿಸಿ ಬ್ರೇಕ್ ಹಾಕಿದರಾದರೂ ಈತನ ಮೇಲೆ ಚಕ್ರ ಉರುಳಿದ್ದರಿಂದ ಸ್ಥಳದಲ್ಲೇ ಅಸುನೀಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆಯನ್ನು ಕಂಡ ಸಾರ್ವಜನಿಕರು ಕ್ಷಣ ಕಾಲ ವಿಚಲಿತರಾಗಿದ್ದಾರೆ. ಮಾಹಿತಿ ಅರಿತ ಚಾಮರಾಜನಗರ ಟ್ರಾಫಿಕ್ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇನ್ನು, ಆತ್ಮಹತ್ಯೆ ದೃಶ್ಯ ಅಂಗಡಿಯೊಂದರ ಮುಂಭಾಗ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇತ್ತೀಚಿನ ಸುದ್ದಿ