ಮನೆ ಮಾರಲು ಒಪ್ಪದಿದ್ದಕ್ಕೆ ರಾತ್ರೋ ರಾತ್ರಿ ಮನೆಯನ್ನೇ ಧ್ವಂಸ ಮಾಡಿದ ರೌಡಿಗಳು: ತಾಯಿ ಮಗ ಬೀದಿಗೆ
ಬೆಂಗಳೂರು: ರೌಡಿಗಳ ಅಟ್ಟಹಾಸಕ್ಕೆ ಬೆಂಗಳೂರು ಬೆಚ್ಚಿಬಿದ್ದಿದೆ. ಮನೆ ಮಾರಾಟ ಮಾಡಲು ಒಪ್ಪದ ತಾಯಿ ಮಗನ ಮೇಲೆ ಗೂಂಡಾಗಿರಿ ನಡೆಸಿದ ರೌಡಿಗಳು ರಾಜಾರೋಷವಾಗಿ ರಾತ್ರೋ ರಾತ್ರಿ ಮನೆಯನ್ನೇ ನೆಲಸಮ ಮಾಡಿರುವ ಘಟನೆ ನಗರದ ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿ ನಡೆದಿದೆ.
ನಗರದ ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿರುವ ಜಯಲಕ್ಷ್ಮಿ ಎಂಬವರ ಮನೆಯನ್ನು ರೌಡಿಗಳು ರಾತ್ರೋ ರಾತ್ರಿ ನೆಲಸಮ ಮಾಡಿದ್ದು, ಮನೆ ಖಾಲಿ ಮಾಡದ್ದಕ್ಕೆ ತಾಯಿ ಮಗನ ಹಲ್ಲೆ ಮಾಡಿ ಅವರ ಕಣ್ಮುಂದೆಯೇ ಮನೆಯನ್ನು ನೆಲಸಮ ಮಾಡಿದ್ದಾರೆ ಎನ್ನಲಾಗಿದೆ.
ಮನೆ ಖಾಲಿ ಮಾಡುವಂತೆ ಪುಂಡರು ಕಳೆದ ಹಲವು ದಿನಗಳಿಂದಲೂ ಒತ್ತಡ ಹಾಕ್ತಿದ್ದಾರಂತೆ, ಆದ್ರೆ ಪುಂಡರ ಒತ್ತಡಕ್ಕೆ ತಾಯಿ ಮಗ ಮಣಿದಿರಲಿಲ್ಲ. ಇದೀಗ ಮುಂಜಾನೆಯಷ್ಟರಲ್ಲಿ ರೌಡಿಗಳೇ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ತಾಯಿ ಮಗ ಬೀದಿಗೆ ಬಿದ್ದಿದ್ದಾರೆ.
ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಜಯಲಕ್ಷ್ಮಿ ಎಂಬುವರು ದೂರು ನೀಡಿದ್ದಾರೆ. ಅಕ್ಟೋಬರ್ 7ರಂದು ಬೆಳಗ್ಗೆ 4-5 ಗಂಟೆಯ ಸುಮಾರಿಗೆ 40-50 ಜನರ ಗುಂಪು ಬಂದು ಮಕ್ಕಳು, ಮೊಮ್ಮಕ್ಕಳ ಕತ್ತಿಗೆ ಲಾಂಗ್, ಮಚ್ಚು ಇಟ್ಟು ಬೆದರಿಕೆ ಹಾಕಿದ್ದಲ್ಲದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನು ಜೈ ಕಿಶನ್, ಪ್ರತಾಪ್, ಚಿನ್ನಬಾಬು ಕುಮ್ಮಕ್ಕಿನಿಂದ ಮಾಡಲಾಗಿದೆ ಎಂದು ಆರೋಪ ಮಾಡಿದ್ದು, ಮಗನ ಕೈಯನ್ನ ಹಿಂದಕ್ಕೆ ಕಟ್ಟಿ, ಕೈಕಾಲುಗಳ ಮೇಲೆ 10-15 ಜನರು ಹಲ್ಲೆ ಮಾಡಿದ್ದಾರೆ. ಮನೆಯ ಸಾಮಗ್ರಿ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: