ಬಯಲಾಯಿತು ಸತ್ಯ: ಆಹಾರದಲ್ಲಿ ಮೂತ್ರ ಬೆರೆಸಿದ ಮಹಿಳೆ ಮುಸ್ಲಿಂ‌ ಅಲ್ಲ: ಫ್ಯಾಕ್ಟ್ ಚೆಕ್ ನಲ್ಲಿ ಸತ್ಯ ಬಯಲು - Mahanayaka
7:03 PM Saturday 14 - December 2024

ಬಯಲಾಯಿತು ಸತ್ಯ: ಆಹಾರದಲ್ಲಿ ಮೂತ್ರ ಬೆರೆಸಿದ ಮಹಿಳೆ ಮುಸ್ಲಿಂ‌ ಅಲ್ಲ: ಫ್ಯಾಕ್ಟ್ ಚೆಕ್ ನಲ್ಲಿ ಸತ್ಯ ಬಯಲು

19/10/2024

ಗಾಜಿಯಾಬಾದ್‌ನಲ್ಲಿ ಆಹಾರದಲ್ಲಿ ಮೂತ್ರ ಬೆರೆಸಿದ ಮನೆಗೆಲಸದಾಕೆ ಮುಸ್ಲಿಂ ಎಂದು ಹಸಿ ಸುಳ್ಳು ಹರಡಿರುವ ಮಾಹಿತಿ ಬಯಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೆ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ಮನೆಕೆಲಸದಾಕೆ ಮನೆಯೊಂದರಲ್ಲಿ ಹಿಟ್ಟು ಮತ್ತು ಪಾತ್ರೆಗಳಲ್ಲಿ ಮೂತ್ರವನ್ನು ಬೆರೆಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಇನ್ನು ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರ ಜೊತೆಗೆ ಮನೆಗೆಲಸದಾಕೆ ಮುಸ್ಲಿಂ ಎಂದು ಸುಳ್ಳು ಮಾಹಿತಿಗಳನ್ನು ಹಂಚಲಾಗಿತ್ತು ಎಂಬುದು ಇದೀಗ ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಗಿದೆ.

ಅಂದಹಾಗೇ ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಥಾನಾ ಕ್ರಾಸಿಂಗ್‌ ರಿಪಬ್ಲಿಕ್‌ ಪ್ರದೇಶದ ಫ್ಲಾಟ್‌ ಒಂದರಲ್ಲಿ ವಾಸವಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಕೆಲಸದಾಕೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿದ್ದ ವೇಳೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ.

ರೀನಾ ಹೆಸರಿನ ಆ ಮಹಿಳೆ ಕಳೆದ 8 ವರ್ಷಗಳಿಂದ ಈ ಉದ್ಯಮಿಯ ಮನೆಯಲ್ಲಿಯೇ ಕೆಲಸವನ್ನು ಮಾಡುತ್ತಿದ್ದು, ಇದೀಗ ಆಕೆ ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡಿದ್ದಾಳೆ ಎಂದು ಬರೆಯಲಾಗಿದೆ.

ಗೂಗಲ್ ಕೀವರ್ಡ್ ಹುಡುಕಾಟವು ಈ ಒಂದೇ ಘಟನೆಯನ್ನು ಒಳಗೊಂಡ ಅನೇಕ ಮಾಧ್ಯಮ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ವರದಿಗಳ ಪ್ರಕಾರ 32 ವರ್ಷದ ಮನೆಕೆಲಸಗಾರ್ತಿ ರೀನಾ ಅವರನ್ನು ರೊಟ್ಟಿ ತಯಾರಿಸಲು ಹಿಟ್ಟಿನಲ್ಲಿ ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಬಂಧಿಸಲಾಗಿದೆ.

ಆಕೆಯ ಮನೆ ಮಾಲೀಕ ಪಾತ್ರೆಯಲ್ಲಿ ಮೂತ್ರ ವಿಸರ್ಜಿಸುವ ಮತ್ತು ಅದನ್ನು ಹಿಟ್ಟಿನಲ್ಲಿ ಬೆರೆಸುವ ವೀಡಿಯೊವನ್ನು ರೆಕಾರ್ಡ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ರೀನಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ತನ್ನ ಉದ್ಯೋಗದಾತ ತನ್ನನ್ನು ಸೂಕ್ಷ್ಮವಾಗಿ ಗಮನಿಸಿದ್ದರಿಂದ ಮತ್ತು ಸಣ್ಣ ತಪ್ಪುಗಳಿಗಾಗಿ ಬೈದಿದ್ದರಿಂದ ಕೋಪದಿಂದ ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ಪ್ರತಿಯಲ್ಲಿ ಆರೋಪಿಯನ್ನು ಪ್ರಮೋದ್ ಕುಮಾರ್ ಅವರ ಪತ್ನಿ ರೀನಾ ಎಂದು ಗುರುತಿಸಲಾಗಿದೆ ಎಂದು ದೃಢಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ