ಅಪ್ಪ-ಮಗನ ತಲೆಯಲ್ಲಿ ಅರಳಿದ ವಿಶ್ವ ಕಪ್: ಟೀಂ ಇಂಡಿಯಾಗೆ ವಿಶೇಷವಾಗಿ ವಿಶ್!! - Mahanayaka

ಅಪ್ಪ-ಮಗನ ತಲೆಯಲ್ಲಿ ಅರಳಿದ ವಿಶ್ವ ಕಪ್: ಟೀಂ ಇಂಡಿಯಾಗೆ ವಿಶೇಷವಾಗಿ ವಿಶ್!!

world cup
19/11/2023

ಚಾಮರಾಜನಗರ: ಹಳ್ಳಿಗಳಿಂದ ದಿಲ್ಲಿ ತನಕ ಕ್ರಿಕೆಟ್ ಜ್ವರ ಇಂದು ವ್ಯಾಪಿಸಿದ್ದು ದೇಶಾದ್ಯಂತ ಪೂಜೆ, ಹಾರೈಕೆ ಮೂಲಕ ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.


Provided by

ಅದರಂತೆ, ಚಾಮರಾಜನಗರದಲ್ಲಿ ಅಪ್ಪ-ಮಗ ವಿಶ್ವಕಪ್ ಮಾದರಿಯನ್ನು ತಲೆಯಲ್ಲಿ ಧರಿಸಿಕೊಂಡು ಟೀಂ ಇಂಡಿಯಾಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಚಾಮರಾಜನಗರದ ಗುರು ಹಾಗೂ ಇವರ ಪುತ್ರ ಪ್ರತ್ಯೇಕ್ಷ್ ಎಂಬವರು ತಾವೇ ವಿಶ್ವಕಪ್ ಮಾದರಿ ಕಿರೀಟವನ್ನು ತಯಾರಿಸಿ ಧರಿಸಿಕೊಂಡು ಈ ಸಲ ಕಪ್ ನಮ್ಮದೇ ಎಂದು ಜೋಶ್ ನಲ್ಲಿ ಹಾರೈಸಿದ್ದಾರೆ.

ಇಡೀ ದೇಶವೇ ಕಾತರದಿಂದ ಪಂದ್ಯ ನೋಡಲಿದ್ದು ಕಪ್ ಎತ್ತಿ ಹಿಡಿಯುವ ಕ್ಷಣಕ್ಕಾಗಿ ಕಾಯುತ್ತಿದ್ದೇವೆ, ಇಡೀ ಮ್ಯಾಚ್ ನ್ನು ನಾನು ಈ ವಿಶ್ವಕಪ್ ಮಾದರಿ ಧರಿಸಿಕೊಂಡು ನೋಡುತ್ತೇನೆ, ನಮಗೇ ಕಪ್ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗುರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ