ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಸೇನಾ ಕ್ಷಿಪ್ರಕ್ರಾಂತಿ ನಡೆಯುವ ಸಾಧ್ಯತೆ - Mahanayaka

ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಸೇನಾ ಕ್ಷಿಪ್ರಕ್ರಾಂತಿ ನಡೆಯುವ ಸಾಧ್ಯತೆ

25/03/2025

ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಸೇನಾ ಕ್ಷಿಪ್ರಕ್ರಾಂತಿ ನಡೆಯುವ ಸಾಧ್ಯತೆ ಇದ್ದು, ಮಧ್ಯಂತರ ಸರ್ಕಾರದ ಅಧ್ಯಕ್ಷ ಮುಹಮ್ಮದ್‌ ಯೂನೂಸ್‌ ರನ್ನು ಕಿತ್ತೊಗೆದು ಸೇನೆ ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬೆಳವಣಿಗೆಗೆ ಸಿದ್ಧತೆ ನಡೆದಿರುವುದಾಗಿ ವರದಿ ತಿಳಿಸಿದೆ. ಇತ್ತೀಚೆಗೆ ವಿವಿಧ ರಾಜಕೀಯ ಪಕ್ಷಗಳು ಸೇನೆ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಈ ಬೆಳವಣಿಗೆ ಸೇನೆಯಲ್ಲಿರುವ ಕೆಲವರಿಗೆ ಅಸಮಾಧಾನ ತಂದಿತ್ತು.

ಮುಂಬರುವ ದಿನಗಳಲ್ಲಿ ಪ್ರಮುಖ ಬೆಳವಣಿಗೆ ನಡೆಯಲಿರುವ ಸಾಧ್ಯತೆಯ ನಿಟ್ಟಿನಲ್ಲಿ ಸೇನಾ ಮುಖ್ಯಸ್ಥ ವಾಕರ್‌ ಯುಜ್‌ ಝಮಾನ್‌ ತುರ್ತು ಸಭೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಸೇನಾ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರ್ಮಿಯ ಉನ್ನತ ಅಧಿಕಾರಿಗಳು, ಐವರು ಲೆಫ್ಟಿನೆಂಟ್‌ ಜನರಲ್ಸ್‌ ಗಳು, ಎಂಟು ಮೇಜರ್‌ ಜನರಲ್‌ ಗಳು ಹಾಗೂ ಕಮಾಂಡಿಂಗ್‌ ಅಧಿಕಾರಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

ಕಳೆದ ವರ್ಷ ಆಗಸ್ಟ್‌ ನಲ್ಲಿ ನಡೆದ ತೀವ್ರ ಹೋರಾಟ, ಹಿಂಸಾಚಾರದ ನಂತರ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಸರ್ಕಾರ ಪತನಗೊಂಡ ಅನಂತರ ಮುಹಮ್ಮದ್‌ ಯೂನುಸ್‌ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ದೇಶದಲ್ಲಿ ಅಭದ್ರತೆ, ಅಸ್ಥಿರತೆ ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಸ್ಥಿರತೆಯನ್ನು ಪುನರ್‌ ಸ್ಥಾಪಿಸುವ ನೆಲೆಯಲ್ಲಿ ಸೇನೆ ಸಭೆ ನಡೆಸಿ ಚರ್ಚಿಸಿರುವುದಾಗಿ ಮೂಲಗಳು ತಿಳಿಸಿವೆ. ದೇಶದಲ್ಲಿ ತುರ್ತು ಸ್ಥಿತಿ ಘೋಷಿಸುವಂತೆ ಸೇನೆ ಅಧ್ಯಕ್ಷರ ಮೇಲೆ ಒತ್ತಡ ಹೇರಿರುವುದಾಗಿ ತಿಳಿಸಿದೆ.
ಈ ಎಲ್ಲಾ ಬೆಳವಣಿಗೆ ನಡುವೆ ಯೂನೂಸ್‌ ಶೀಘ್ರವೇ ಚೀನಾಕ್ಕೆ ಭೇಟಿ ನೀಡುವ ಸಾಧ್ಗತೆ ಇದ್ದಿರುವುದಾಗಿ ವರದಿ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ