ಇತರ ಬ್ಯಾಂಕುಗಳ ಎಟಿಎಂಗಳಿಂದ ಹಣ ವಿಥ್‌ಡ್ರಾ ಮಾಡ್ತೀರಾ? ಸೇವಾ ಶುಲ್ಕ 2 ರೂಪಾಯಿಗೆ ಹೆಚ್ಚಳ

ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕುಗಳ ಎಟಿಎಂಗಳನ್ನು ಹೊರತುಪಡಿಸಿ, ಇತರ ಬ್ಯಾಂಕುಗಳ ಎಟಿಎಂಗಳಿಂದ ಹಣ ವಿಥ್‌ಡ್ರಾ ಮಾಡುವ ಸೇವಾ ಶುಲ್ಕವನ್ನು 2 ರೂ.ಗೆ ಹೆಚ್ಚಿಸಲಾಗಿದೆ. ಈ ಹೊಸ ಶುಲ್ಕ ಮೇ 1ರಿಂದ ಜಾರಿಗೆ ಬರಲಿದೆ. ಉಚಿತವಾಗಿ ನಡೆಸುವ 5 ವಹಿವಾಟಿನ ನಂತರದ ವಿಥ್‌ಡ್ರಾಕ್ಕೆ ಈ ನಿಯಮ ಅನ್ವಯವಾಗಲಿದೆ.
ಬ್ಯಾಂಕ್‌ಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಯೂ ಅಧಿಕವಾಗಿದೆ. ಹಣಕಾಸು ಹೊರತಾಗಿನ ವಹಿವಾಟಿನ ಶುಲ್ಕವನ್ನು 1 ರೂ.ಗೆ ಪರಿಷ್ಕರಿಸಲಾಗಿದೆ.
ಖಾಸಗಿ ಸಂಸ್ಥೆಗಳ ಎಟಿಎಂಗಳು ಮತ್ತು ಬ್ಯಾಂಕ್‌ಗಳಿಗೆ ಎಟಿಎಂಗಳ ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಶುಲ್ಕವನ್ನು ಹೆಚ್ಚಿಸಲಾಗಿದೆ. 2021ರಲ್ಲಿ ಈ ಶುಲ್ಕಗಳನ್ನು ಹೆಚ್ಚಿಸಲಾಗಿತ್ತು.
ಈ ಬಾರಿ ಎಟಿಎಂ ಮೂಲಕ ನಗದು ಹಿಂಪಡೆಯಲು ಇಂಟರ್‌ಚೇಂಜ್ ಶುಲ್ಕವನ್ನು ₹17 ರಿಂದ ₹19ಕ್ಕೆ ಹೆಚ್ಚಿಸಲಾಯಿತು. ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸೇತರ ವಹಿವಾಟುಗಳಿಗೆ ಇಂಟರ್‌ಚೇಂಜ್ ಶುಲ್ಕವನ್ನು ₹6 ರಿಂದ ₹7 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ನೀವು ಐದು ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಇದರರ್ಥ ಬೇರೆ ಬ್ಯಾಂಕಿನ ಎಟಿಎಂ ಅನ್ನು ಐದು ಬಾರಿ ಬಳಸುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ ಮೆಟ್ರೋಯೇತರ ನಗರಗಳಲ್ಲಿ ಈ ಮಿತಿ ಮೂರು ವಹಿವಾಟುಗಳಿಗೆ ಸೀಮಿತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj