ಈ ಆನೆ ಮರಿಗೆ ನಾಯಿಯೇ ಬೆಸ್ಟ್ ಫ್ರೆಂಡ್ | ನೆಟ್ಟಿಗರ ಹೃದಯ ಗೆದ್ದ ವಿಡಿಯೋ - Mahanayaka

ಈ ಆನೆ ಮರಿಗೆ ನಾಯಿಯೇ ಬೆಸ್ಟ್ ಫ್ರೆಂಡ್ | ನೆಟ್ಟಿಗರ ಹೃದಯ ಗೆದ್ದ ವಿಡಿಯೋ

27/11/2020

ಎಲ್ಲರಿಗೂ ಸ್ನೇಹಿತರು ಬೇಕು, ಆದರೆ ಈ ಆನೆ ಮರಿಗೆ ಈ ನಾಯಿ ಮಾತ್ರವೇ ಸ್ನೇಹಿತ. ನಾಯಿಯ ಜೊತೆಗೆ ಆನೆ ಮಾರಿ ಆಟವಾಡುತ್ತಿರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

ಆನೆ ಥೈಲ್ಯಾಂಡ್‌ ನ ಎಲಿಫೆಂಟ್ ನೇಚರ್ ಪಾರ್ಕ್‌ನಲ್ಲಿ 2015ರಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ  ಸುಸಂತಾ ನಂದಾ ಅವರು, ಟ್ವಿಟ್ಟರ್ ನಲ್ಲಿ ಮರು ಪೋಸ್ಟ್ ಮಾಡಿದ ಬಳಿಕ ಈ ವಿಡಿಯೋ ವೈರಲ್ ಆಗುತ್ತಿದೆ.


ಈ ವಿಡಿಯೋವು ನಾನಾ ರೀತಿಯ ಅರ್ಥಗಳನ್ನು ಹೊಂದಿದ್ದು,  ಪಾರ್ಕ್ ಗೆ ಪ್ರವೇಶಿಸಿದ ನಾಯಿಯನ್ನು ಹೊಡೆದೋಡಿಸುವ ಬದಲು ಆನೆ ಮರಿಯು ಆಟವಾಡಲು ಆರಂಭಿಸಿತು ಎಂಬಿತ್ಯಾದಿ ಟೈಟಲ್ ಗಳೊಂದಿಗೆ ೀ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ