ಜಗತ್ತನ್ನೇ ನಗಿಸಿದ್ದ ಚಾರ್ಲಿ ಚಾಪ್ಲಿನ್ | ಅನ್ಯಾಯ, ಅಕ್ರಮಗಳನ್ನು ಪ್ರಶ್ನಿಸಿದ್ದು ಹೀಗೆ - Mahanayaka
1:17 AM Tuesday 27 - February 2024

ಜಗತ್ತನ್ನೇ ನಗಿಸಿದ್ದ ಚಾರ್ಲಿ ಚಾಪ್ಲಿನ್ | ಅನ್ಯಾಯ, ಅಕ್ರಮಗಳನ್ನು ಪ್ರಶ್ನಿಸಿದ್ದು ಹೀಗೆ

27/11/2020

ಜಗತ್ತಿನ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹೆಸರು ಕೇಳಿದರೆ ಯಾರಿಗೆ ತಾನೆ ಗೊತ್ತಿಲ್ಲ.  ಲಂಡನ್ ನ ಬಡ ಕುಟುಂಬದಲ್ಲಿ ಜನಿಸಿದ್ದ ಚಾರ್ಲಿ ಚಾಪ್ಲಿನ್,  ತನ್ನ 12ನೇ ವಯಸ್ಸಿನಲ್ಲಿಯೇ ನಾಟಕಕ್ಕೆ ಸೇರ್ಪಡೆಗೊಂಡರು. ಹಲವಾರು ನಾಟಕ ಕಂಪೆನಿಗಳಲ್ಲಿ ದುಡಿಯುತ್ತಾ, ಆರಂಭದಲ್ಲಿ ಅಲೆಮಾರಿ ಜೀವನ ನಡೆಸಿದರು. ಆ ಬಳಿಕ ಅವರು ನಿರೀಕ್ಷಿಸದೆಯೇ, ಹಣ, ಹೆಸರು ಅವರನ್ನು ಹುಡುಕಿಕೊಂಡು ಬಂದಿತ್ತು.  1914ರಲ್ಲಿ ಅಮೆರಿಕದ ಹಾಲಿವುಡ್ ಗೆ ಎಂಟ್ರಿ ಪಡೆದುಕೊಂಡ ಅವರು, ಅಲ್ಲಿ ಹತ್ತಾರು ಕಿರುಚಿತ್ರಗಳಲ್ಲಿ ನಟಿಸಿದರು. ಇದರಲ್ಲಿ ಅವರು ಕೊಂಚಮಟ್ಟಿನ ಹಣವನ್ನು ಗಳಿಸಿದರು.

ಕೇವಲ ಹಾಸ್ಯಗಾರನಾಗಿಯೇ ಉಳಿಯದ ಅವರು, ಅಮೆರಿಕದ ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿ ವಿರುದ್ಧ ಸಿಡಿದೆದ್ದಿದ್ದರು. ತಮ್ಮ ಕಲೆಯ ಮೂಲಕವೇ ಇವೆಲ್ಲವನ್ನೂ ಅವರು ವಿರೋಧಿಸುತ್ತಾ ಬಂದರು. ಇದಕ್ಕಾಗಿ ಅವರಿಗೆ ದೇಶದ್ರೋಹಿ ಎಂಬ ಪಟ್ಟವನ್ನೂ ಕಟ್ಟಲಾಯಿತು.
 

ಹಿಟ್ಲರ್ ನ ನಾಜಿ ಶಾಹಿಯ ಬಗ್ಗೆ ತಾವೇ ಹಿಟ್ಲರ್ ಆಗಿ ಅಭಿನಯಿಸಿ ಆತನನ್ನು ಲೇವಡಿ ಮಾಡಿದ್ದರು.  ವಸಹತುಶಾಹಿ, ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳನ್ನು ತಮ್ಮ ಜೀವನದ ಉದ್ದಕ್ಕೂ ವಿರೋಧಿಸುತ್ತಲೇ ಬಂದರು.

ಗೋಲ್ಡ್ ರಶ್, ಗ್ರೇಟ್ ಡಿಟೆಕ್ಟರ್ ಇವರ ಪ್ರಸಿದ್ಧ ಚಿತ್ರಗಳು. ತೆರೆಯ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಚಾರ್ಲಿ ಚಾಪ್ಲಿನ್ ತಮ್ಮ ಬದುಕಿನ ಉದ್ದಕ್ಕೂ ಬಹಳಷ್ಟು ನೋವುಗಳನ್ನು ಎದುರಿಸಿದ್ದರು. ಇಡೀ ಜಗತ್ತನ್ನೇ ನಕ್ಕು ನಗಿಸಿದ ಚಾರ್ಲಿ ಚಾಪ್ಲಿನ್ ಅವರು 1952 ಆಸ್ಕರ್ ಪ್ರಶಸ್ತಿಯನ್ನು ಪಡೆದರು. ಅಂದು ಚಾರ್ಲಿಚಾಪ್ಲಿನ್ ಅವರನ್ನು ಯಾರೆಲ್ಲ ವಿರೋಧಿಸಿದ್ದರೋ ಅವರೆಲ್ಲರೂ ಚಾರ್ಲಿಚಾಪ್ಲಿನ್ ಪ್ರಶಸ್ತಿ ಪಡೆಯಲು ಬಂದಾಗ ಸ್ವಾಗತಿಸಿದರು.  ಬಳಿಕ ಸ್ವಿಜ್ಜರ್ಲೇಂಡ್ ಗೆ ತೆರಳಿದ ಅವರು ಇದೇ ಇಸವಿಯಲ್ಲಿ ನಿಧನರಾದರು.

ಇತ್ತೀಚಿನ ಸುದ್ದಿ