ಸೀಟು ಬೆಲ್ಟ್ ಧರಿಸದ ನಾಗರಿಕ, ಶರ್ಟ್ ಬಟನ್, ಮಾಸ್ಕ್ ಹಾಕದ ಪೊಲೀಸ್ | ನಾಗರಿಕನಿಗೆ ಅಶ್ಲೀಲ ಶಬ್ದಗಳಿಂದ ಬೈದ ಪೊಲೀಸ್ - Mahanayaka

ಸೀಟು ಬೆಲ್ಟ್ ಧರಿಸದ ನಾಗರಿಕ, ಶರ್ಟ್ ಬಟನ್, ಮಾಸ್ಕ್ ಹಾಕದ ಪೊಲೀಸ್ | ನಾಗರಿಕನಿಗೆ ಅಶ್ಲೀಲ ಶಬ್ದಗಳಿಂದ ಬೈದ ಪೊಲೀಸ್

27/11/2020

ತಿರುವನಂತಪುರಂ: ಸೀಟು ಬೆಲ್ಟ್ ಧರಿಸದ ನಾಗರಿಕ, ಶರ್ಟ್ ಬಟನ್ ಹಾಕದ ಪೊಲೀಸ್. ಸದ್ಯ ಕೇರಳದಲ್ಲಿ ಈ ಒಂದು ವಿಚಾರ ಭಾರೀ ಚರ್ಚೆಗೀಡಾಗುತ್ತಿದೆ. ನೌಜಾಸ್ ಮುಸ್ತಫಾ ಎಂಬ ಯುವಕ ಸೀಟ್ ಬೆಲ್ಟ್ ಹಾಕದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ತಡೆದಿದ್ದು, ಸೀಟು ಬೆಲ್ಟ್ ಹಾಕುವಂತೆ ಗದರಿದ್ದಾರೆ. ಈ ವೇಳೆ ಯುವಕ ತಾವು ಮೊದಲು ಶರ್ಟ್ ಬಟನ್ ಹಾಕಿಕೊಳ್ಳಿ ಎಂದು ಹೇಳಿದ್ದು, ಈ ವೇಳೆ ಪೊಲೀಸ್ ಅಧಿಕಾರಿ ನಾಗರಿಕನಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.


Provided by

ನೌಜಾಸ್ ಮುಸ್ತಫಾ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತಾನು ತನ್ನ ಸ್ನೇಹಿತನೊಂದಿಗೆ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ವೇಳೆ ಮನ್ನಾರ್ ನಾಯರ್ ಸಮಾಜ ಶಾಲೆಯ ಬಳಿ ಪೊಲೀಸ್ ಅಧಿಕಾರಿ ನಮ್ಮ ವಾಹನ ನಿಲ್ಲಿಸಿದರು. ನಮ್ಮ ವಾಹನದ ಎಡಭಾಗದ ಸೀಟು ಬೆಲ್ಟ್ ಕೆಟ್ಟು ಹೋಗಿತ್ತು. ಆದ್ದರಿಂದ ಧರಿಸಲು ಯೋಗ್ಯವಾಗಿರಲಿಲ್ಲ. ಹಾಗಾಗಿ ನನ್ನ ಸ್ನೇಹಿತ ಸೀಟು ಬೆಲ್ಟ್ ಧರಿಸಿರಲಿಲ್ಲ.  ನಾವು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದೆವು ಆದರೆ ಅವರು, ಉಪಯೋಗ ಯೋಗ್ಯವಲ್ಲದ ಸೀಟು ಬೆಲ್ಟನ್ನು ರಿಪೇರಿ ಮಾಡುವುದು ವಾಹನ ಚಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನಾವು ದಂಡ ಕಟ್ಟಲು ಸಿದ್ಧರಾದೆವು. ಅದೇ ಸಂದರ್ಭದಲ್ಲಿ ಅಲ್ಲಿ ವಾಹನ ಪರಿಶೀಲಿಸುತ್ತಿದ್ದ ಪೊಲೀಸ್ ಒಬ್ಬರು ತಮ್ಮ ಶರ್ಟ್ ನ ಬಟನ್ ಹಾಕಿರಲಿಲ್ಲ, ಜೊತೆಗೆ ಅವರು ಮಾಸ್ಕ್ ಕೂಡ ಧರಿಸಲಿಲ್ಲ. ಟವಲ್ ನ್ನು ಮುಖಕ್ಕೆ ಸುತ್ತಿಕೊಂಡಿದ್ದರು. ನಾನು ತಕ್ಷಣವೇ ಅವರ ಫೋಟೋವನ್ನು ತೆಗೆದಿದ್ದು, ಈ ವೇಳೆ, ಆ ಪೊಲೀಸ್ ನೀವು ಏನು ಶಾ**** ನನ್ನ ಫೋಟೋ ಏಕೆ ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ನೀವು ಶರ್ಟ್ ಬಟನ್ ಹಾಕಿಲ್ಲ, ಮಾಸ್ಕ್ ಕೂಡ ಹಾಕಿಲ್ಲ ಎಂದು ಹೇಳಿದಾಗ ಅಸಭ್ಯವಾಗಿ ಆ ಅಧಿಕಾರಿ ಬೈದಿದ್ದಾನೆ ಎಂದು ನೌಜಾಸ್ ಮುಸ್ತಫಾ ದೂರಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಪೊಲೀಸ್ ಅಧಿಕಾರಿ, ನಾನು ಪ್ಯಾಂಟ್ ಝಿಬ್ ತೆಗೆಯುತ್ತೇನೆ ಅದನ್ನೂ ಫೋಟೋ ತೆಗೆದುಕೊಳ್ಳಿ ಎಂದಿದ್ದು, ಈ ವೇಳೆ ನಾವು ಕಾರಿನೊಳಗೆ ಕುಳಿತುಕೊಂಡೆವು.  ಈ ವೇಳೆ ಆ ಅಧಿಕಾರಿ ಹಲ್ಲೆಗೂ ಮುಂದಾಗಿದ್ದಾರೆ. ನಂತರ ಒಂದು ಗಂಟೆಯ ಬಳಿಕ ನಮ್ಮಿಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.

ಈ ನಡುವೆ, ಸರಿಯಾಗಿ ಸಮವಸ್ತ್ರ ಧರಿಸದ ಆ ಅಧಿಕಾರಿಯು ತನ್ನನ್ನು ಹೀಗೆ ಪರಿಚಯಿಸಿಕೊಂಡಿದ್ದು, ನನ್ನ ಹೆಸರು ಸಿದ್ದಿಕುಲ್ ಅಕ್ಬರ್, ಕಷ್ಟಪಟ್ಟು ಕೆಲಸ ಮಾಡಲು ಈ ದೇಹವನ್ನು ಹೀಗೆ ಇಟ್ಟಿದ್ದೇನೆ, ಇದು ಜನರಿಗೆ ತೋರಿಸುವುದಕ್ಕಲ್ಲ,  ನೀವೇನು ಶಾ**** ಮಾಡುತ್ತೀರಾ? ಎಂದು ಅಶ್ಲೀಲ ಶಬ್ಧಗಳನ್ನು ಬಳಸಿದ್ದಾನೆ.

ಇತ್ತೀಚಿನ ಸುದ್ದಿ