ಬುದ್ಧಿಮಾಂಧ್ಯತೆಗೆ ಜಾರಿದ್ದ ನರ್ತಕಿಗೆ ಹಳೆಯ ಹಾಡು ಕೇಳಿಸಿದಾಗ ಆದ ಬದಲಾವಣೆ  ಎಂತಹದ್ದು ಗೊತ್ತಾ? | ಖಂಡಿತಾ ಶಾಕ್ ಆಗ್ತೀರಿ - Mahanayaka
5:23 PM Thursday 16 - January 2025

ಬುದ್ಧಿಮಾಂಧ್ಯತೆಗೆ ಜಾರಿದ್ದ ನರ್ತಕಿಗೆ ಹಳೆಯ ಹಾಡು ಕೇಳಿಸಿದಾಗ ಆದ ಬದಲಾವಣೆ  ಎಂತಹದ್ದು ಗೊತ್ತಾ? | ಖಂಡಿತಾ ಶಾಕ್ ಆಗ್ತೀರಿ

14/11/2020

ಮಾರ್ಟಾ ಸಿ ಗೊನ್ಜಾಲೆಜ್ ಅವರು ಒಬ್ಬರು ನೃತ್ಯಗಾತಿ ಅವರು ತಮ್ಮ ವೃದ್ಧಾಪ್ಯದ ಸಂದರ್ಭದಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡು ತಮ್ಮ ಹಳೆಯ ನೃತ್ಯಗಳ ಹಾಡುಗಳನ್ನು ಕೇಳುತ್ತಾ, ಬದಲಾಗುತ್ತಾ ಹೋಗುತ್ತಾರೆ. ಅವರ ಕೈಗಳು ಅವರಿಗೆ ತಿಳಿಯದೇ ಚಲಿಸುತ್ತದೆ. ನೃತ್ಯದ ಸಂದರ್ಭದಲ್ಲಿ ಅವರು ಹೇಗೆ ಕೈಗಳನ್ನು ಚಲಿಸುತ್ತಿದ್ದರೂ ಅಷ್ಟೇ ಸರಾಗವಾಗಿ ಅವರು ಕೈಗಳನ್ನು ಚಲಿಸುತ್ತಾರೆ.

ಈ ವಿಡಿಯೋ ಸದ್ಯ ಇನ್ಟಾ ಗ್ರಾಮ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಮೊದಲು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ಇನ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಆ ಬಳಿಕ ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.


ADS

ವಿಡಿಯೋದಲ್ಲಿರುವ ವೃದ್ಧೆ ಮಾರ್ಟಾ ಸಿ ಗೊನ್ಜಾಲೆಜ್ ಅವರು ವಯೋಸಹಜ ಬುದ್ಧಿಮಾಂಧ್ಯತೆಯಲ್ಲಿದ್ದರು. ಆ ಸಂದರ್ಭದಲ್ಲಿ ಅವರಿಗೆ ತಾವು ನರ್ತಿಸುತ್ತಿದ್ದ ಹಾಡುಗಳನ್ನು ಕೇಳಿಸಿದಾಗ ಅವರಲ್ಲಿ ಬದಲಾವಣೆ ಕಂಡು ಬಂತು. ಅವರು ತಾಳಕ್ಕೆ ತಕ್ಕ ಹಾಗೆ ತಮ್ಮ ಕೈಗಳನ್ನು ಚಲಿಸಲು ಆರಂಭಿಸಿದ್ದರು. ಮಾರ್ಟಾ ಸಿ ಗೊನ್ಜಾಲೆಜ್ ಅವರು ತಮ್ಮ  ವೆಲೆನ್ಸಿಯಾ ಮನೆಯಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತು ಈ ರೀತಿಯಾಗಿ ವರ್ತಿಸಿದ್ದಾರೆ.

ಅಂದ ಹಾಗೆ ಮಾರ್ಟಾ ಸಿ ಗೊನ್ಜಾಲೆಜ್ ಅವರು 2019 ರಲ್ಲಿ ನಿಧನರಾಗಿದ್ದಾರೆ. ಆದರೆ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.

 

View this post on Instagram

 

A post shared by Farhan Akhtar (@faroutakhtar)

ಇತ್ತೀಚಿನ ಸುದ್ದಿ