ತೋಡಿಗೆ ಜಾರಿ ಬಿದ್ದು ವ್ಯಕ್ತಿಯ ದಾರುಣ ಸಾವು - Mahanayaka
11:19 AM Friday 14 - February 2025

ತೋಡಿಗೆ ಜಾರಿ ಬಿದ್ದು ವ್ಯಕ್ತಿಯ ದಾರುಣ ಸಾವು

belthangady
28/07/2022

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಮನೆಯಿಂದ ಅಂಗಡಿಗೆ ಹೋಗಿ ವಾಪಸ್ ಮನೆಗೆ ಬರುವಾಗ ಮನೆಯ ತೋಡು ದಾಟುವ ವೇಳೆ ನೀರು ಜಾಸ್ತಿ ಇದ್ದ ಕಾರಣ ಜಾರಿಬಿದ್ದು ಮುಳುಗಿ ಮೃತಪಟ್ಟ ಘಟನೆ ಇಂದಬೆಟ್ಟು ನಲ್ಲಿ ಬುಧವಾರ ಸಂಜೆ ನಡೆದಿದೆ.

ಇಂದಬೆಟ್ಟು ಗ್ರಾಮದ ಬರಮೇಲು ನಿವಾಸಿ ಪೂವಪ್ಪ(54) ಎಂಬವರು ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮನೆಯಿಂದ ಕಿಲ್ಲೂರು  ಅಂಗಡಿ ಹೋಗಿ ವಾಪಸ್ ಮನೆಗೆ ಹೋಗುವಾಗ ಮನೆಯ ತೋಟದ ತೋಡು ದಾಟುವ ವೇಳೆ ಕಾಲು ಜಾರಿಬಿದ್ದು ಸಾವನ್ನಪ್ಪಿದ್ದಾರೆ.

ಮನೆಯವರು ಪೂವಪ್ಪ ಸಂಜೆಯಾಗಿದ್ದರು ವಾಪಸ್ ಬರದೆ ಇದ್ದಾಗ ಹುಡುಕಾಟ ನಡೆಸಿದ್ದಾರೆ ರಾತ್ರಿ ಸುಮಾರು 9 ಗಂಟೆಗೆ ತೋಟದ ತೋಡಿನದಲ್ಲಿ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ.

ಬುಧವಾರ ಮಳೆ ಇದ್ದ ಕಾರಣ ತೋಡಿನಲ್ಲಿ ನೀರು ಜಾಸ್ತಿ ಇದ್ದ ಕಾರಣ ನೀರಲ್ಲಿ ಬಿದ್ದವರು ಮುಳುಗಿ ಸಾವನ್ನಪ್ಪಿದಾಗಿ ಮನೆಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ