ಅಡ್ಡಂಡ ಸಿ ಕಾರ್ಯಪ್ಪ  ಅವರ 'ಟಿಪ್ಪು ನಿಜ ಕನಸುಗಳು' ಪುಸ್ತಕ ಮಾರಾಟ, ವಿತರಣೆಗೆ ತಡೆಯಾಜ್ಞೆ - Mahanayaka
5:08 AM Wednesday 11 - December 2024

ಅಡ್ಡಂಡ ಸಿ ಕಾರ್ಯಪ್ಪ  ಅವರ ‘ಟಿಪ್ಪು ನಿಜ ಕನಸುಗಳು’ ಪುಸ್ತಕ ಮಾರಾಟ, ವಿತರಣೆಗೆ ತಡೆಯಾಜ್ಞೆ

tippu nijakanasugalu book
23/11/2022

ಟಿಪ್ಪು ಸುಲ್ತಾನ್ ಕುರಿತಾಗಿ ಪೂರ್ವಾಗ್ರಹ ಮತ್ತು ಕಾಲ್ಪನಿಕ ಮಾಹಿತಿಗಳನ್ನೊಳಗೊಂಡ  ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ಬರೆದಿರುವ ‘ಟಿಪ್ಪು ನಿಜ ಕನಸುಗಳು’ ಪುಸ್ತಕ ವಿತರಣೆ ಮತ್ತು ಮಾರಾಟಕ್ಕೆ ಇಲ್ಲಿನ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಪುಸ್ತಕದಲ್ಲಿ ಹಿಂದಿನ ಮೈಸೂರು ಸಾಮ್ರಾಜ್ಯದ ಆಡಳಿತದ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಡಿಸೆಂಬರ್ 3ರವರೆಗೆ ಈ ಪುಸ್ತಕವನ್ನು ಮಾರಾಟ ಮಾಡದಂತೆ ಲೇಖಕ, ಪ್ರಕಾಶಕ ಅಯೋಧ್ಯೆ ಪ್ರಕಾಶನ ಮತ್ತು ರಾಷ್ಟ್ರೋತ್ಥಾನ ಮುದ್ರಾಣಾಲಯಕ್ಕೆ ಮಂಗಳವಾರ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಮೂವರು ಪ್ರತಿವಾದಿಗಳ ಮೂಲಕ ಅಥವಾ ಅವರ ಅಡಿಯಲ್ಲಿ ಕ್ಲೈಮ್ ಮಾಡುವ ವ್ಯಕ್ತಿಗಳು ಮತ್ತು ಏಜೆಂಟ್‌ಗಳು ಆನ್‌ಲೈನ್ ವೇದಿಕೆ ಸೇರಿದಂತೆ ಕನ್ನಡ ಭಾಷೆಯಲ್ಲಿ ಬರೆದಿರುವ ಟಿಪ್ಪು ನಿಜ ಕನಸುಗಳು ಹೆಸರಿನ ಪುಸ್ತಕದ ವಿತರಣೆ ಮತ್ತು ಮಾರಾಟ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆಯ ಮೂಲಕ ನಿರ್ಬಂಧಿಸಲಾಗಿದೆ ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ