ಆನೆಯ ಹಿಂಡಿನೊಂದಿಗೆ ಬಂದ ಮರಿ ಆನೆ ತೋಟದಲ್ಲಿಯೇ ಉಳಿಯಿತು | ಮುಂದೇನಾಯ್ತು ನೋಡಿ
30/10/2020
ಉಜಿರೆ: ಆನೆಗಳ ಹಿಂಡಿನ ಜೊತೆಗೆ ಆಹಾರ ಸೇವಿಸಲು ಬಂದಿದ್ದ ಮರಿಯಾನೆ ಗುಂಪಿನಿಂದ ತಪ್ಪಿ ತೋಟದಲ್ಲಿಯೇ ಉಳಿದ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ನಿವಾಸಿ ಡೀಕಯ್ಯ ಗೌಡ ಅವರ ತೋಟಕ್ಕೆ ನುಗ್ಗಿದ್ದ ಆನೆಗಳ ಹಿಂಡು ರಾತ್ರಿ ಕೃಷಿಯನ್ನು ಹಾನಿ ಮಾಡಿದೆ.. ಆ ಬಳಿಕ ಆನೆಗಳು ಮರಳಿ ಹೋಗಿವೆ. ಈ ಸಂದರ್ಭದಲ್ಲಿ ಮರಿಯಾನೆಯೊಂದು ಇಲ್ಲಿಯೇ ಉಳಿದಿದೆ.
ತೋಟದ ಮಾಲಿಕ ತೋಟಕ್ಕೆ ಹೋದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಅವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಸುಮಾರು 2 ತಿಂಗಳು ಪ್ರಾಯದ ಮರಿ ಆನೆ ಇದಾಗಿದೆ. ಇದು ಇಲ್ಲಿಯೇ ಬಾಕಿಯಾಗಿರುವ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಮತ್ತೆ ಬರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ.