ಸಿಡಿದ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್: ತಂದೆ ಸಾವು, ಮಗಳ ಸ್ಥಿತಿ ಚಿಂತಾಜನಕ - Mahanayaka
10:20 PM Wednesday 19 - March 2025

ಸಿಡಿದ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್: ತಂದೆ ಸಾವು, ಮಗಳ ಸ್ಥಿತಿ ಚಿಂತಾಜನಕ

transformer blast
24/03/2022

ಬೆಂಗಳೂರು: ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಿಡಿದು ಸ್ಕೂಟರ್ ನಲ್ಲಿ ಹೋಗುತ್ತಿದ್ದ ತಂದೆ ಮಗಳು ಅಪಾಯಕ್ಕೆ ಸಿಲುಕಿದ ಘಟನೆ ನಗರದ ಉಲ್ಲಾಳ ಬಳಿಯ ಮಂಗನಹಳ್ಳಿ ಗ್ರಾಸ್ ಬಳಿ ಬುಧವಾರ ನಡೆದಿದೆ.


Provided by

ವಿದ್ಯುತ್ ಟ್ರಾನ್ಸ್ ಫರ್ ಫಾರ್ಮರ್ ಸಿಡಿದ ವೇಳೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮಗಳ ಮೇಲೆ ಬೆಂಕಿ ಹತ್ತಿಕೊಂಡಿದ್ದು, ತಂದೆಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಗಳು ಶೇ.50ರಷ್ಟು ಸುಟ್ಟ ಗಾಯಗಳೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗನಹಳ್ಳಿ ನಿವಾಸಿಯಾಗಿರುವ 55 ವರ್ಷ ವಯಸ್ಸಿನ ಶಿವರಾಜ್ ಅವರು ಮಗಳ ಮದುವೆಯ ಸಂಭ್ರಮದಲ್ಲಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಮಗಳು ಚೈತನ್ಯಗೆ ಮದುವೆ ನಿಶ್ಚಯ ಮಾಡಿಸಿದ್ದ ಶಿವರಾಜ್ ಅವರು, ನಿಶ್ಚಿತಾರ್ಥ ನಡೆಸಲು ಹಾಲ್ ಬುಕ್ ಮಾಡಲು ಮಗಳನ್ನು  ಕರೆದುಕೊಂಡು ಹೊರಟಿದ್ದರು. ಈ ವೇಳೆ ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ ಸಿಡಿದಿದ್ದು, ಈ ವೇಳೆ ಇಬ್ಬರ ಮೇಲೆಯೂ ಬೆಂಕಿ ಹತ್ತಿಕೊಂಡಿದೆ. ತಂದೆ ಮಗಳ ಕಿರುಚಾಟ ಕೇಳಿ ಸ್ಥಳೀಯರು ಬಂದು ಬೆಡ್ ಶೀಟ್ ನಿಂದ ಬೆಂಕಿ ಆರಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಂದೆ ಸಾವನ್ನಪ್ಪಿದ್ದು, ಮಗಳ ಸ್ಥಿತಿ ಚಿಂತಾಜನಕವಾಗಿದೆ.


Provided by

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ:

ಟ್ರಾನ್ಸ್ ಫಾರ್ಮರ್ ನಲ್ಲಿ ಆಗಾಗ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿದೆ. ಒಮ್ಮೆ ಪರಿಶೀಲಿಸಿ ಎಂದು ಸ್ಥಳೀಯರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು, ಇದರಿಂದಾಗಿ ನೂರಾರು ಕನಸು ಹೊತ್ತು ಸಾಗುತ್ತಿದ್ದ ಯುವತಿ ಹಾಗೂ ಮಗಳ ಮದುವೆಯ ಸಂಭ್ರಮದಲ್ಲಿದ್ದ ತಂದೆ ಅನ್ಯಾಯವಾಗಿ ದುರಂತ ಸಾವನ್ನಪ್ಪಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ವಿಚಾರ: ಕಾಂಗ್ರೆಸ್ ನ ಬಂಡವಾಳ ಬಯಲು ಮಾಡಿದ ಮಾಧುಸ್ವಾಮಿ

ವಿಷಪೂರಿತ ಮಿಠಾಯಿ ಸೇವಿಸಿ ನಾಲ್ವರು ಮಕ್ಕಳ ದಾರುಣ ಸಾವು

ಹಾಸನದ ‘ರಾಜೀವ್ ಆಸ್ಪತ್ರೆ’ಯಲ್ಲಿ ಮಾರ್ಚ್ 25ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೋವಿಡ್-19 ಲಸಿಕೆ ಕಡ್ಡಾಯಗೊಳಿಸಿಲ್ಲ: ಸುಪ್ರೀಂ ಕೋಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ದೇವಸ್ಥಾನದ ವಠಾರದಲ್ಲಿ ಯಾರು ಬ್ಯಾನರ್ ಹಾಕಿದ್ದಾರೆ ಎಂದು ಗೊತ್ತಿಲ್ಲ | ಬಪ್ಪನಾಡು ದೇವಸ್ಥಾನ ಮುಕ್ತೇಸರರು ಹೇಳಿದ್ದೇನು?

ಇತ್ತೀಚಿನ ಸುದ್ದಿ