ಟ್ರಿಪ್ ಗೆ ಬಂದ್ರೆ ನಾಯಕಿ ಮಾಡ್ತೀವಿ ಎಂದಿದ್ರಂತೆ: ನಟಿ ಚೈತ್ರಾ ಆಚಾರ್ ಹೇಳಿದ್ದೇನು? - Mahanayaka

ಟ್ರಿಪ್ ಗೆ ಬಂದ್ರೆ ನಾಯಕಿ ಮಾಡ್ತೀವಿ ಎಂದಿದ್ರಂತೆ: ನಟಿ ಚೈತ್ರಾ ಆಚಾರ್ ಹೇಳಿದ್ದೇನು?

Chaitra Achar
18/09/2024

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಮಾದರಿಯಲ್ಲಿ ಸ್ಯಾಂಡಲ್ ವುಡ್ ನಲ್ಲೂ ನಟಿಯರ ರಕ್ಷಣೆಗೆ ಸಮಿತಿ ಬೇಕು ಎನ್ನುವು ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ನಟಿ ಚೈತ್ರಾ ಜೆ. ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲ ಅಂತ ಹೇಳೊಕೆ ಆಗಲ್ಲ, ಶೋಷಣೆ ಇಲ್ಲ ಅಂತ ಹೇಳೋದು ಪ್ರಪಂಚದಲ್ಲಿ ಕಳ್ಳತನ ಇಲ್ಲ ಎಂದಂತೆ. ನನಗೆ ಯಾವತ್ತೂ ಈ ರೀತಿಯ ಅನುಭವ ಆಗಿಲ್ಲ. ಆದ್ರೆ ಶೋಷಣೆ ಆಗಿರೋರು ನನ್ನ ಬಳಿ ಹೇಳಿ ಕೊಂಡಿದ್ದಾರೆ ಎಂದು ಅವರು ಹೇಳಿದರು.

ನನ್ನ ಎರಡನೇ ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ತಮಗಾದ ಅನುಭವ ಹಂಚಿಕೊಂಡಿದ್ದರು ಎಂದು ಚೈತ್ರಾ ಹೇಳಿದ್ದಾರೆ.

ಜೂನಿಯರ್ ಆರ್ಟಿಸ್ಟ್ ಒಬ್ಬರು ಸಿನಿಮಾವೊಂದಕ್ಕೆ ಆಡಿಷನ್ ಕೊಟ್ಟಿದ್ದರಂತೆ, ಮೊದಲ ರೌಂಡ್ ನಲ್ಲಿ ಸೆಲೆಕ್ಟ್ ಆಗಿದ್ದೀರಿ ಎಂದಿದ್ದರಂತೆ, ಬಳಿಕ ಕಾಲ್ ಮಾಡಿ ನಮ್ಮ ಜೊತೆ ಟ್ರಿಪ್ ಗೆ ಬನ್ನಿ ನಿಮ್ಮನೆ ನಾಯಕಿ ಮಾಡ್ತೀನಿ ಎಂದು ಹೇಳಿದ್ದರಂತೆ ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.

ಕಮಿಟಿ ಅಂತ ಆದರೆ, ಮುಂದೆ ಬರೋ ನಟಿಯರಿಗೆ ಅನುಕೂಲ ಅಗುತ್ತೆ, ಯಾರಿಗೆ ಏನೇ ಸಮಸ್ಯೆ ಆದ್ರೂ ಕಮಿಟಿ ಗಮನಕ್ಕೆ ತರಬಹುದು ಎಂದು ಚೈತ್ರಾ ಆಚಾರ್ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ