ಅಧ್ಯಕ್ಷ ಚುನಾವಣೆ ಸಮೀಪಿಸುತ್ತಿರುವಾಗಲೇ ಟ್ರಂಪ್ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು ಚೀನಾ ಬ್ಯಾಂಕ್ ಅಕೌಂಟ್ - Mahanayaka

ಅಧ್ಯಕ್ಷ ಚುನಾವಣೆ ಸಮೀಪಿಸುತ್ತಿರುವಾಗಲೇ ಟ್ರಂಪ್ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು ಚೀನಾ ಬ್ಯಾಂಕ್ ಅಕೌಂಟ್

21/10/2020

ವಾಷಿಂಗ್ಟನ್:  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೂ ಚೀನಾದ ಬ್ಯಾಂಕ್ ವೊಂದರಲ್ಲಿ ಖಾತೆ ಹೊಂದಿದ್ದು, ಜೊತೆಗೆ ಚೀನಾ ಉದ್ಯಮ ಯೋಜನೆಗಳನ್ನೂ ನಡೆಸುತ್ತಿದ್ದಾರೆ ಎನ್ನುವುದು ಇದೀಗ ಬಹಿರಂಗಗೊಂಡಿದ್ದು, ಇಲ್ಲಿಯವರೆಗೆ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಚೀನಾವನ್ನು ಬಳಸಿಕೊಂಡು ಹೇಳಿಕೆ ನೀಡುತ್ತಿದ್ದ ಟ್ರಂಪ್ ಗೆ ಚೀನಾ ಬ್ಯಾಂಕ್ ಅಕೌಂಟ್ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ.

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಚೀನಾದ ಪರ ಮೃದು ಧೋರಣೆ ಹೊಂದಿದ್ದಾರೆ ಎಂದು ಟ್ರಂಪ್ ಬಿಂಬಿಸುತ್ತಲೇ ಬಂದಿದ್ದರು. ಆದರೆ ಟ್ರಂಪ್ ಅವರ ತೆರಿಗೆ ದಾಖಲೆಗಳಲ್ಲಿ ಚೀನಾದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವುದು ಮತ್ತು ಉದ್ಯಮ ಯೋಜನೆ ನಡೆಸುತ್ತಿರುವುದು ಬಯಲಾಗಿದೆ. ಇದು ಟ್ರಂಪ್ ಗೆ ತೀವ್ರ ಹಿನ್ನಡೆಯನ್ನುಂಟು ಮಾಡಲಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಚೀನಾ ಮಾತ್ರವಲ್ಲದೇ ಬ್ರಿಟನ್, ಐರ್ಲೇಂಡ್ ಗಳಲ್ಲಿಯೂ ಟ್ರಂಪ್ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ಸ್ ಮ್ಯಾನೇಜ್‌ಮೆಂಟ್ ನಿಭಾಯಿಸುತ್ತಿರುವ ಚೀನಾದ ಬ್ಯಾಂಕ್ ಖಾತೆಯಲ್ಲಿ 2013-2015ರ ಅವಧಿಯಲ್ಲಿ 188,561 ಡಾಲರ್‌ಅನ್ನು ತೆರಿಗೆಯಾಗಿ ಪಾವತಿಸಲಾಗಿದೆ. ಟ್ರಂಪ್ ಅವರ ವಿದೇಶಿ ಬ್ಯಾಂಕ್ ಖಾತೆಗಳಿಂದ ಎಷ್ಟು ಹಣ ರವಾನೆಯಾಗಿದೆ ಎಂಬುದನ್ನು ತೆರಿಗೆ ದಾಖಲೆಗಳು ತೋರಿಸಿಲ್ಲ ಎಂದು ವರದಿಯಾಗಿದೆ.


Provided by

ಇತ್ತೀಚಿನ ಸುದ್ದಿ