ನೂಡಲ್ಸ್ ತಿಂದು ಒಂದೇ ಮನೆಯ 9 ಮಂದಿ ಸಾವು! - Mahanayaka

ನೂಡಲ್ಸ್ ತಿಂದು ಒಂದೇ ಮನೆಯ 9 ಮಂದಿ ಸಾವು!

21/10/2020

ಬೀಜಿಂಗ್: ನೂಡಲ್ಸ್ ತಿಂದು ಒಂದೇ ಕುಟುಂಬದ 9 ಜನರು ಸಾವನ್ನಪ್ಪಿರುವ ಘಟನೆಯೊಂದು ಚೀನಾದಲ್ಲಿ ನಡೆದಿದ್ದು, ಈ ಕುಟುಂಬದಲ್ಲಿ ಈಗ ಮೂವರು ಮಕ್ಕಳು ಮಾತ್ರವೇ ಬದುಕುಳಿದಿದ್ದಾರೆ.

ಹೋಮ್ ಮೇಡ್ ನೂಡಲ್ಸ್ ನ್ನು ಫ್ರಿಡ್ಜ್ ನಲ್ಲಿಡಲಾಗಿತ್ತು. ಸುಮಾರು 1 ವರ್ಷಗಳಿಂದಲೂ ಇದು ಫ್ರಿಡ್ಜ್ ನಲ್ಲಿ ಹಾಗೆಯೇ ಇತ್ತು. ದೀರ್ಘ ಕಾಲ ಫ್ರಿಡ್ಜ್ ನಲ್ಲಿದ್ದುದರಿಂದ ನೂಡಲ್ಸ್ ಬೊಂಗ್ರೆಕಿಕ್ ಎಂಬ ವಿಷಕಾರಿ ಪದಾರ್ಥವಾಗಿ ಮಾರ್ಪಾಡಾಗಿತ್ತು. ಇದನ್ನು ಗಮನಿದೇ ತಿಂದ ಒಂದೇ ಮನೆಯ 9 ಜನರು ಸಾವಿಗೀಡಾಗಿದ್ದಾರೆ.

ಚೀನಾದ ಈಶಾನ್ಯ ಪ್ರಾಂತ್ಯ ಹೆಲಾಂಗ್ಜಿಯಾಂಗ್​ನ ಜಿಕ್ಸಿ ನಗರದ ನಿವಾಸಿಗಳು ಮೃತಪಟ್ಟವರು ಎಂದು ಹೇಳಲಾಗಿದೆ. ಈ ಮೃತರ ಪೈಕಿ 7 ಜನರು ವಯಸ್ಕರು ಎಂದು ಹೇಳಲಾಗಿದೆ.

ಮನೆಯಲ್ಲಿಯೇ ಈ ನೂಡಲ್ಸ್ ನ್ನು ತಯಾರಿಸಲಾಗಿತ್ತು. ಹೀಗಾಗಿ ನೂಡಲ್ಸ್ ರುಚಿಯಾಗಿಲ್ಲ ಎಂದು ಮೂವರು ಮಕ್ಕಳು ತಿಂದಿಲ್ಲ. ಹೀಗಾಗಿ ಅವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ