ತನ್ನ ಸೋಲಿಗೆ ಕಾರಣ ಯಾರು ಎಂದು ಬಯಲು ಮಾಡಿದ ಟ್ರಂಪ್!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಲಿಗೆ ಕಾರಣವನ್ನು ಹೇಳಿದ್ದು, ಇದೀಗ ಅವರ ಹೇಳಿಕೆ ತೀವ್ರವಾಗಿ ಚರ್ಚೆಗೀಡಾಗಿದೆ. ಚುನಾವಣಾ ಸೋಲನ್ನು ಸಮರ್ಥಿಸಲು ಅವರು ಕೊರೊನಾ ಲಸಿಕೆಯ ಮೇಲೆ ದೂರು ಹಾಕಿದ್ದಾರೆ.
ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮತ್ತು ಫಿಜರ್ ಉದ್ದೇಶ ಪೂರ್ವಕವಾಗಿಯೇ ಕೊರೊನಾ ಲಸಿಕೆ ಪೂರೈಕೆಯನ್ನು ವಿಳಂಬ ಮಾಡಿ ತನ್ನ ಸೋಲಿಗೆ ಕಾರಣವಾದವು ಎಂದು ಔಷಧಿ ತಯಾರಕ ಕಂಪೆನಿಗಳ ಮೇಲೆ ಅವರು ಕಿಡಿಕಾರಿದ್ದಾರೆ.
ತನ್ನ ಸೋಲಿಗಾಗಿಯೇ ಕಂಪೆನಿಗಳು ಕೊರೊನಾ ಲಸಿಕೆಯನ್ನು ವಿಳಂಬ ಮಾಡಿವೆ ಎಂದು ತನ್ನ ಸೋಲಿನ ಹೊಣೆಯನ್ನು ಔಷಧಿ ಕಂಪೆನಿಗಳು ಹೊರುವಂತೆ ಮಾಡಿದ್ದಾರೆ. ಅಮೆರಿಕ ಹಾಗೂ ಜರ್ಮನಿಯ ಕಂಪೆನಿಗಳು ಸೇರಿ ಕೊವಿಡ್ 19 ಮೂರನೇ ಹಂತದ ಲಸಿಕೆ ತಯಾರಿಕೆ ನಡೆಸುತ್ತಿವೆ. ಈಗಾಗಲೇ 90 ಭಾಗ ಇದು ಪೂರ್ಣಗೊಂಡಿದೆ. ಇದೇ ಸಂದರ್ಭದಲ್ಲಿ ಟ್ರಂಪ್ ಅವರು ತನ್ನ ಸೋಲಿಗೆ ಕೊವಿಡ್ ಲಸಿಕೆ ವಿಳಂಬವೇ ಕಾರಣ ಎಂದು ಕಂಪೆನಿಗಳನ್ನು ಮೇಲೆ ಕಿಡಿಕಾರಿದ್ದಾರೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.