ವಿಮಾನದ ಮೂಲಕ ಗಾಝಾಕ್ಕೆ ಆಹಾರ ವಸ್ತುಗಳ ನ್ನು ತಲುಪಿಸುವ ತುರ್ಕಿಯ ಪ್ರಯತ್ನಕ್ಕೆ ಇಸ್ರೇಲ್ ತಡೆ - Mahanayaka

ವಿಮಾನದ ಮೂಲಕ ಗಾಝಾಕ್ಕೆ ಆಹಾರ ವಸ್ತುಗಳ ನ್ನು ತಲುಪಿಸುವ ತುರ್ಕಿಯ ಪ್ರಯತ್ನಕ್ಕೆ ಇಸ್ರೇಲ್ ತಡೆ

09/04/2024

ವಿಮಾನದ ಮೂಲಕ ಗಾಝಾಕ್ಕೆ ಆಹಾರ ವಸ್ತುಗಳ ನ್ನು ತಲುಪಿಸುವ ತುರ್ಕಿಯ ಪ್ರಯತ್ನಕ್ಕೆ ಇಸ್ರೇಲ್ ತಡೆ ಹೇರಿದೆ. ಇದರ ಬೆನ್ನಲ್ಲೇ ಇಸ್ರೇಲ್ ಗೆ ರಫ್ತನ್ನು ನಿಷೇಧಿಸಿ ಟರ್ಕಿ ಪ್ರತಿಕಾರ ತೀರಿಸಿದೆ. ಮುಖ್ಯವಾಗಿ ಕಬ್ಬಿಣ, ಉಕ್ಕು, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳು, ಯಂತ್ರಗಳು ಸಹಿತ 54 ವಿಧದ ಉತ್ಪನ್ನಗಳ ರಫ್ತಿಗೆ ತುರ್ಕಿ ನಿಷೇಧ ಹೇಳಿದೆ.

ವಿಮಾನದ ಮೂಲಕ ಗಾಝಾಕ್ಕೆ ನೆರವು ನೀಡುವ ನಮ್ಮ ಪ್ರಯತ್ನಕ್ಕೆ ಇಸ್ರೇಲ್ ತಡೆಹೇರಿದೆ ಎಂದು ದಿನಗಳ ಹಿಂದೆ ತುರ್ಕಿಯ ವಿದೇಶ ಸಚಿವ ಹಕ್ಕನ್ ಹೇಳಿದ್ದರು. ಮಾತ್ರ ಅಲ್ಲ ಇದಕ್ಕೆ ನಾವು ಪ್ರತಿಕಾರ ತೀರಿಸಿಯೇ ಸಿದ್ಧ ಎಂದು ಅವರು ಹೇಳಿದ್ದರು. ಇದೀಗ ಇಸ್ರೇಲ್ಗೆ ರಫ್ತು ನಿಷೇಧವನ್ನು ವಿಧಿಸಿ ತುರ್ಕಿ ಪ್ರತೀಕಾರ ತೀರಿಸಿಕೊಂಡಿದೆ.

ಇಸ್ರೇಲ್ ಅಂತಾರಾಷ್ಟ್ರೀಯ ನಿಯಮಗಳನ್ನೆಲ್ಲ ಗಾಳಿಗೆ ತೂರಿದೆ. ಅದು ಕದನ ವಿರಾಮಕ್ಕೆ ಒಪ್ಪಿಕೊಳ್ಳುವವರೆಗೆ ಮತ್ತು ಗಾಝಾದ ಜನರಿಗೆ ನೆರವನ್ನು ತಲುಪಿಸುವುದಕ್ಕೆ ಅನುಮತಿಸುವವರೆಗೆ ನಮ್ಮ ಈ ನಿರ್ಬಂಧ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ