ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಇಬ್ಬರು ಉದ್ಯೋಗಿಗಳ ಮೇಲೆ ಗುಂಡಿನ ದಾಳಿ: ಇಬ್ಬರ ಬಂಧನ
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಇಬ್ಬರು ಉದ್ಯೋಗಿಗಳಾದ ಮೊಹಮ್ಮದ್ ನದೀಮ್ ಮತ್ತು ಕಲೀಮ್ ಅವರ ಮೇಲೆ ಬೈಕ್ ನಲ್ಲಿ ಬಂದ ದಾಳಿಕೋರರು ಕ್ಯಾಂಪಸ್ ನಲ್ಲಿ ಗುಂಡಿಕ್ಕಿದ್ದಿದ್ದಾರೆ.
ಗಾಯಗೊಂಡ ಸಹೋದರರಾದ ಮೊಹಮ್ಮದ್ ನದೀಮ್ ಮತ್ತು ಕಲೀಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಇಬ್ಬರೂ ವಿಶ್ವವಿದ್ಯಾಲಯದ ಆವರಣದೊಳಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ಬೈಕಿನಲ್ಲಿ ಬಂದ ಇಬ್ಬರು ದಾಳಿಕೋರರು ನಿಲ್ಲಿಸಿ ಹತ್ತಿರದಿಂದ ಅವರ ಮೇಲೆ ಗುಂಡು ಹಾರಿಸಿದ್ದು ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿಯ ನಂತರ ವಿಶ್ವವಿದ್ಯಾಲಯದ ಭದ್ರತಾ ಗಸ್ತು ತಂಡವು ಅವರನ್ನು ಬೆನ್ನಟ್ಟಿದ ನಂತರ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕ್ಯಾಂಪಸ್ ಜೊಳಗೆ ನಾಲ್ಕರಿಂದ ಐದು ಸುತ್ತುಗಳ ಗುಂಡಿನ ದಾಳಿ ನಡೆದಿದೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ದಾಳಿಯ ಉದ್ದೇಶ ಹಳೆಯ ದ್ವೇಷ ಎಂದು ಶಂಕಿಸಲಾಗಿದೆ.
ನದೀಮ್ ಅವರ ಪತ್ನಿಯ ಪ್ರಕಾರ, ದಾಳಿಕೋರರು ಕ್ರಿಮಿನಲ್ ತಂಡಕ್ಕೆ ಸೇರಿದವರಾಗಿದ್ದು, ತಮ್ಮ 13 ವರ್ಷದ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಹೀಗಾಗಿ ನಾವು ಅವರ ವಿರುದ್ಧ ಪೊಸ್ಕೊ ಪ್ರಕರಣವನ್ನು ದಾಖಲಿಸಿದ್ದೇವು ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth