ಫೆಲೆಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಫಾರ್ಮುಲಾ ಒಂದೇ ಪರಿಹಾರ: ಕತಾರ್ ಹೇಳಿಕೆ

ಫೆಲೆಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಫಾರ್ಮುಲಾ ಒಂದೇ ಪರಿಹಾರ ಎಂದು ಕತಾರ್ ಹೇಳಿದೆ. ಗಾಝಾದ ಮಂದಿಯನ್ನು ಈಜಿಪ್ಟ್ ಮತ್ತು ಜೋರ್ಡಾನ್ ಗೆ ಕಳುಹಿಸಿಕೊಡಬೇಕು ಎಂಬ ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಕತರ್ ವಿದೇಶಾಂಗ ವಕ್ತಾರ ಮಜೀದ್ ಅಲ್ ಅನ್ಸಾರಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಫೆಲೆಸ್ತೀನಿಯರಿಗೆ ಅವರ ಹಕ್ಕುಗಳನ್ನ ನೀಡಲೇಬೇಕು. ಇದಕ್ಕಿರುವ ಏಕೈಕ ಪರಿಹಾರ ಏನೆಂದರೆ ದ್ವಿರಾಷ್ಟ್ರ ಫಾರ್ಮುಲಾ ಎಂದವರು ಹೇಳಿದ್ದಾರೆ.
ಪಶ್ಚಿಮೇಶ್ಯಾದ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಟ್ರಂಪ್ ಸರಕಾರದೊಂದಿಗೆ ಮತ್ತು ಪಶ್ಚಿಮೇಶ್ಯ ಕ್ಕೆ ಸಂಬಂಧಿಸಿ ಟ್ರಂಪ್ ಸರ್ಕಾರದ ಪ್ರತಿನಿಧಿ ಸ್ಟೀವ್ ಇಟ್ಕೊ ಜೊತೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಈ ವಿಷಯದಲ್ಲಿ ಕತರ್ ನ ನಿಲುವನ್ನು ಈಗಾಗಲೇ ಅವರಿಗೆ ತಿಳಿಸಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತಕ್ಕೆ ಸಂಬಂಧಿಸಿದ ವಿಧಿ ವಿಧಾನಗಳ ಬಗ್ಗೆ ಕಾರ್ಯ ಯೋಜನೆ ನಡೆಯುತ್ತಿದೆ. ಮೊದಲ ಘಟ್ಟದ ಕದನ ವಿರಾಮಕ್ಕೆ ಸಂಬಂಧಿಸಿ ಎರಡೂ ಗುಂಪುಗಳಿಂದ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿವೆ. ಆದರೆ ದೊಡ್ಡ ಮಟ್ಟದಲ್ಲಿ ಕದನ ವಿರಾಮ ಒಪ್ಪಂದದ ಉಲ್ಲಂಘನೆ ನಡೆದಿಲ್ಲ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj