ಇಬ್ಬರು ಮಹಿಳೆಯರನ್ನು ಸೌದಿ ಅರೇಬಿಯದಲ್ಲಿ 4 ಲಕ್ಷ ರೂ. ಗೆ ಮಾರಾಟ ಮಾಡಿದ ಆರೋಪಿ ಅರೆಸ್ಟ್! - Mahanayaka

ಇಬ್ಬರು ಮಹಿಳೆಯರನ್ನು ಸೌದಿ ಅರೇಬಿಯದಲ್ಲಿ 4 ಲಕ್ಷ ರೂ. ಗೆ ಮಾರಾಟ ಮಾಡಿದ ಆರೋಪಿ ಅರೆಸ್ಟ್!

crime
23/09/2023

ಪುಣೆ: ಇಬ್ಬರು ಮಹಿಳೆಯರನ್ನು ಸೌದಿ ಅರೇಬಿಯಾದಲ್ಲಿ ತಲಾ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಬೆಂಗಳೂರು ಮೂಲದ ಆರೋಪಿಯನ್ನು ಗುರುವಾರ ಮುಂಬೈನಲ್ಲಿರುವ ಆತನ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.


Provided by

 ಎಂ. ಫಯಾಜ್ ಯಾಹ್ಯಾ ಬಂಧಿತ ಆರೋಪಿಯಾಗಿದ್ದಾನೆ.  ಸೌದಿ ಅರೇಬಿಯಾದಲ್ಲಿ ತಲಾ 4 ಲಕ್ಷ ರೂಪಾಯಿಗೆ ಮಹಾರಾಷ್ಟ್ರ ಮೂಲದ ಇಬ್ಬರು ಮಹಿಳೆಯರನ್ನು ಈತ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಮುಂಬೈನಲ್ಲಿರುವ ಆತನ ಮನೆಯಿಂದ ಗುರುವಾರ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಎಂ. ಫಯಾಜ್ ಯಾಹ್ಯಾ ಸೌದಿ ಅರೇಬಿಯಾದಲ್ಲಿ ತಲಾ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಮಹಿಳೆಯರು ಹೇಗೋ ತಪ್ಪಿಸಿಕೊಂಡು ಬಂದು ಆತನ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪುಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ