ಉಜಿರೆ: 8 ವರ್ಷದ ಬಾಲಕನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ - Mahanayaka

ಉಜಿರೆ: 8 ವರ್ಷದ ಬಾಲಕನನ್ನು ಅಪಹರಿಸಿ 17 ಕೋಟಿ ರೂ. ಬೇಡಿಕೆ

18/12/2020


Provided by

ಮಂಗಳೂರು: 8 ವರ್ಷದ ಬಾಲಕನ್ನು ಅಪಹರಿಸಿ 17 ಕೋಟಿ ರೂಪಾಯಿಗಳಿಗೆ ಬೇಡಿಕೆಯಿಟ್ಟ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಬ್ಲಿ ನಡೆದಿದೆ.

 ಮಾಜಿ ಸೈನಿಕ ಶಿವನ್​ ಪುತ್ರ ಬಿಜೋಯ್ ಎಂಬುವರ ಮಗ ಅನುಭವ್ ನನ್ನು ಅಪಹರಿಸಲಾಗಿದೆ.  ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಗುವನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದೆ.

ನಿನ್ನೆ ಸಂಜೆ 6:30ರ ಸುಮಾರಿಗೆ ಅಪಹರಣ ನಡೆದಿದ್ದು,  ಹಳದಿ ಪ್ಲೇಟ್ ನಂಬರ್​ನ ಇಂಡಿಕಾ ಕಾರ್​ನಲ್ಲಿ ಅಪಹರಿಸಲಾಗಿದೆ. ಬಿಜೋಯ್ ಅವರು ಹಾರ್ಡ್​ವೇರ್ ವ್ಯವಹಾರಸ್ಥರಾಗಿದ್ದಾರೆ.  ಇವರ ಪುತ್ರನ ಅಪಹರಣದ ಬಳಿಕ ನಿನ್ನೆ ಬಿಜೋಯ್ ಪತ್ನಿ ಸರಿಯಾ ಬಿಜೋಯ್ ಗೆ ಕರೆ ಮಾಡಿ 17 ಕೋಟಿ ರೂಪಾಯಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.

ಅಪಹರಣಕಾರರು ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಎರಡು ಪೊಲೀಸ್ ತಂಡದೊಂದಿಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಿಂದ ಹೊರ ಹೋಗುವ ಎಲ್ಲ ದಾರಿಗಳಲ್ಲಿ ನಾಕಾಬಂದಿ ಇರಿಸಲಾಗಿದೆ.

ಇತ್ತೀಚಿನ ಸುದ್ದಿ