ಕಿಡ್ನಿ ಮಾರಾಟ ಮಾಡಲು ಮುಂದಾದ ಉದ್ಯಮಿ | ಕಾರಣ ಏನು ಗೊತ್ತಾ? - Mahanayaka

ಕಿಡ್ನಿ ಮಾರಾಟ ಮಾಡಲು ಮುಂದಾದ ಉದ್ಯಮಿ | ಕಾರಣ ಏನು ಗೊತ್ತಾ?

17/12/2020

ಕುಲ್ಗಾಮ್: ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು  ತನ್ನ ಕಿಡ್ನಿಯನ್ನು ಮಾರಾಟ ಮಾಡಲು  ಮುಂದಾಗಿರುವ ವಿಚಿತ್ರ   ಘಟನೆ  ಕಾಶ್ಮೀರದಲ್ಲಿ  ನಡೆದಿದ್ದು,  ಕುಲ್ಗಾಮ್ ನಿವಾಸಿ ಸಬ್ಜರ್ ಅಹ್ಮದ್ ಖಾನ್(28)ಎಂಬ ವ್ಯಕ್ತಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.


Provided by

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ನಂತರ ನಿಷೇಧಾಜ್ಞೆ ಹೇರಲಾಗಿತ್ತು. ನಿಷೇಧಾಜ್ಞೆ ಮುಗಿದು ಕೆಲವೇ ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಜಾರಿ ಮಾಡಲಾಗಿತ್ತು ಇದರಿಂದ  ಸಬ್ಜರ್   ವ್ಯವಹಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ್ದ.  ಬಳಿಕ ವ್ಯವಹಾರದ ನಷ್ಟವನ್ನು ಸರಿದೂಗಿಸಲು  ಬ್ಯಾಂಕ್ ನಲ್ಲಿ 61ಕೋಟಿ ರೂಪಾಯಿ ಸಾಲ ಮಾಡಿದ್ದು, ಪರಿಚಿತರ ಜೊತೆಗೂ 30 ಕೋಟಿ ಸಾಲ ಮಾಡಿದ್ದಾನೆ ಎನ್ನಲಾಗಿದೆ.

ಸಾಲ ಮಾಡಿದ ಬಳಿಕ ದಿನ ಕಳೆದಂತೆ ಸಾಲದ ಹೊರೆ ಹೆಚ್ಚಾಗಿದ್ದು, ಅದನ್ನು ತೀರಿಸಲು ಯಾವುದೇ ದಾರಿ ಕಾಣದೆ ಕೊನೆಗೆ ತನ್ನ ಕಿಡ್ನಿಯನ್ನು  ಮಾರಾಟಮಾಡಲು  ಮುಂದಾಗಿದ್ದೇನೆ ಎಂದು ಸಬ್ಜರ್  ತಿಳಿಸಿದ್ದಾನೆ.

ಈತನ ಜಾಹೀರಾತನ್ನು ನೋಡಿ ಹಲವರು ಕಿಡ್ನಿ ಬೇಕೆಂದು ಕರೆ ಮಾಡಿದ್ದಾರೆ  ಎಂದು  ಸಬ್ಬರ್  ಹೇಳುತ್ತಾನೆ. ಒಬ್ಬ ವ್ಯಕ್ತಿ 20 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರೆ, ಇನ್ನೊಬ್ಬ 25 ಲಕ್ಷ ರೂಪಾಯಿ ಕೊಡುವುದಾಗಿ ಕರೆ ಮಾಡಿ ಆಫರ್ ಮಾಡಿದ್ದಾನೆ ಆದರೆ  ಇದ್ದರಿಂದ  ತೃಪ್ತನಾಗದ ಆತ ಒಳ್ಳೆಯ ಆಫರ್ ಬರಬಹುದು  ಎಂದು ಕಾಯುತ್ತಿರುವುದಾಗಿ ಸಬ್ಜರ್  ಹೇಳುತ್ತಿದ್ದಾನೆ.

ಇತ್ತೀಚಿನ ಸುದ್ದಿ