ಸಾಂತಾ ಕ್ಲಾಸ್ ನಲ್ಲಿ ಉಡುಗೊರೆಗಾಗಿ ಬಾಲಕಿ ಇಟ್ಟ ಬೇಡಿಕೆ ಕಂಡು ದಂಗಾದ ನೆಟ್ಟಿಗರು - Mahanayaka

ಸಾಂತಾ ಕ್ಲಾಸ್ ನಲ್ಲಿ ಉಡುಗೊರೆಗಾಗಿ ಬಾಲಕಿ ಇಟ್ಟ ಬೇಡಿಕೆ ಕಂಡು ದಂಗಾದ ನೆಟ್ಟಿಗರು

18/12/2020

ನ್ಯೂಯಾರ್ಕ್: ಕ್ರಿಸ್ಮಸ್ ಸಂದರ್ಭದಲ್ಲಿ ಸಾಂತಾಕ್ಲಾಸ್ ನ ಉಡುಗೊರೆಗಾಗಿ ಮಕ್ಕಳು ಕಾಯುತ್ತಿರುತ್ತಾರೆ. ಹಾಗೆಯೇ ಪ್ರತಿ ವರ್ಷವೂ ಸಾಂತಾಕ್ಲಾಸ್ ಮಕ್ಕಳಿಗೆ ಉಡುಗೊರೆ ನೀಡುವುದು ಕೂಡ ವಾಡಿಕೆಯಾಗಿದೆ. ಇದೇ ಸಂದರ್ಭದಲ್ಲಿ ಇಲ್ಲೊಬ್ಬಳು 9 ವರ್ಷದ ಬಾಲಕಿ ಸಾಂತಾಕ್ಲಾಸ್ ಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

9 ವರ್ಷದ ಬಾಲಕಿಯ ಅಕ್ಕಾ ಈ  ಪತ್ರವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದು, ಬಾಲಕಿ ಉಡುಗೊರೆಗಾಗಿ ಇಟ್ಟ ಬೇಡಿಕೆಯ ಲಿಸ್ಟ್ ನೋಡಿ ನೆಟ್ಟಿಗರು ದಂಗಾಗಿದ್ದಾರೆ.  ಬಾಲಕಿ ಏರ್ ಪಾಡ್ ಸೇರಿದಂತೆ 12 ವಸ್ತುಗಳ ಉದ್ದದ ಪಟ್ಟಿ ಮಾಡಿಕೊಂಡು ಸಾಂತಾಕ್ಲಾಸ್ ಗಾಗಿ ಕಾಯುತ್ತಿದ್ದಾಳೆ.


Provided by

ಬಾಲಕಿ ಸಾಂತಾ ಕ್ಲಾಸ್ ಗೆ ಬರೆದ ಪತ್ರದಲ್ಲಿ ಈ ರೀತಿಯಾಗಿ ಪೀಠಿಕೆ ಹಾಕಿದ್ದಾಳೆ.  ಪ್ರೀತಿಯ ಕ್ರಿಸ್ಮಸ್ ತಾತ, ಈ ವರ್ಷವನ್ನು ನೀನು ಉತ್ತಮವಾಗಿ ಕಳೆದಿರುವೆ ಎಂದು ನಾನು ಅಂದುಕೊಂಡಿದ್ದೇನೆ. ಆದರೆ, ನನಗೆ ಈ ವರ್ಷ ಸಂಪೂರ್ಣವಾಗಿ ವಿರೋಧವಾಗಿತ್ತು. ಹಾಗಾಗಿ ನಾನು ಸಂತೋಷವಾಗಿರಲು ಸಾಧ್ಯವಾಗಿಲ್ಲ. ಹೀಗಾಗಿ ನಾನು ಉಡುಗೊರೆ ಪಡೆಯಲು ಅರ್ಹಳಾಗಿದ್ದಾನೆ ಎಂದು ಬಾಲಕಿ ತನ್ನ ಪತ್ರದಲ್ಲಿ ತಿಳಿಸಿದ್ದು 12 ವಸ್ತುಗಳ ಉದ್ದದ ಪಟ್ಟಿಯನ್ನು ನೀಡಿದ್ದಾಳೆ.

ಇತ್ತೀಚಿನ ಸುದ್ದಿ