‘ವಿವಾದ’ದ ಸಿಗ್ನೇಚರ್: ಫೆಲೆಸ್ತೀನ್ ಪರ ವಿದ್ಯಾರ್ಥಿಗಳಿಗೆ ವೀಸಾ ರದ್ದುಪಡಿಸುವ ವಿವಾದಿತ ಕಾನೂನಿಗೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಹಿ

ಫೆಲೆಸ್ತೀನ್ ಪರ ವಿದ್ಯಾರ್ಥಿಗಳಿಗೆ ವೀಸಾ ರದ್ದುಪಡಿಸುವ ವಿವಾದಿತ ಕಾನೂನಿಗೆ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ. ಇದೇ ವೇಳೆ ಟ್ರಂಪ್ ಅವರ ಈ ನಡೆಯ ವಿರುದ್ಧ ಮಾನವ ಹಕ್ಕು ಸಂಘಟನೆಗಳು ಮತ್ತು ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ವಂಶಹತ್ಯೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವಿದ್ಯಾರ್ಥಿಯ ವಿಸಾವನ್ನು ರದ್ದುಗೊಳಿಸುವುದಕ್ಕೆ ಈ ಕಾನೂನು ಅವಕಾಶ ನೀಡಲಿದೆ.
2023 ಅಕ್ಟೋಬರ್ 7ರಂದು ಇಸ್ರೇಲ್ ನ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕ ನಮ್ಮ ಕ್ಯಾಂಪಸ್ ಗಳಲ್ಲಿ ಮತ್ತು ರಸ್ತೆಗಳಲ್ಲಿ ನಡೆವ ಯಹೂದಿ ವಿರೋಧಿ ಪ್ರತಿಭಟನೆಗಳು ಮತ್ತು ರ್ಯಾಲಿ ಗಳಲ್ಲಿ ಭಾಗವಹಿಸುವುದನ್ನು ನಾವು ಶಕ್ತವಾಗಿ ತಡೆಯುತ್ತೇವೆ. ಜಿಹಾದಿಗಳಿಗೆ ಅನುಕೂಲಕರ ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲಾ ವಿದೇಶಿ ಗಳಿಗೂ ನಾವು ಈ ಕುರಿತಂತೆ ಶಕ್ತವಾದ ಸಂದೇಶವನ್ನು ತಿಳಿಸುತ್ತಿದ್ದೇವೆ. 2025 ರಲ್ಲಿ ನಾವು ನಿಮ್ಮನ್ನು ಪತ್ತೆಹಚ್ಚಲಿದ್ದೇವೆ ಮತ್ತು ಗಡೀಪಾರುಗೊಳಿಸಲಿದ್ದೇವೆ ಎಂದು ಅಮೆರಿಕ ಆಡಳಿತವು ಬಿಡುಗಡೆಗೊಳಿಸಿದ ಪ್ರಸ್ತಾವನೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.
ಯಾವ ಯಾವ ಕಾಲೇಜ್ ಕ್ಯಾಂಪಸ್ ಗಳಲ್ಲಿ ಯಹೂದಿ ವಿರೋಧಿ ಪ್ರತಿಭಟನೆ ನಡೆಸಲಾಗಿದೆ ಮತ್ತು ಅದರಲ್ಲಿ ಯಾರೆಲ್ಲ ಭಾಗವಹಿಸಿದ್ದಾರೆ ಅನ್ನುವ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನಗಳು ಕೂಡ ಈಗ ನಡೆದಿದೆ ಎಂದು ತಿಳಿದುಬಂದಿದೆ.
ಟ್ರಂಪ್ ಅವರು ಇದೀಗ ಈ ಕಾನೂನಿಗೆ ಸಹಿ ಹಾಕಿರುವುದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನ ಬೇಟೆಯಾಡುವುದಕ್ಕೆ ದುರುಪಯೋಗ ಆಗುವ ಸಾಧ್ಯತೆ ಇದೆ. ಹಾಗೆಯೇ ವಿದ್ಯಾರ್ಥಿ ಧ್ವನಿಯನ್ನು ಹತ್ತಿಕ್ಕುವ ಉದ್ದೇಶಕ್ಕಾಗಿಯೂ ಈ ಕಾನೂನು ದುರ್ಬಳಕೆ ಆಗಲಿದೆ ಎಂದು ನಂಬಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj