ಭಾರತೀಯರು ಸಹಿತ ವಿವಿಧ ರಾಷ್ಟ್ರಗಳ ಮುನ್ನೂರಕ್ಕಿಂತಲೂ ಅಧಿಕ ಅಕ್ರಮ ವಲಸಿಗರನ್ನು ಬಂಧನ ಕೇಂದ್ರಕ್ಕೆ ಕಳಿಸಿದ ಅಮೆರಿಕ - Mahanayaka

ಭಾರತೀಯರು ಸಹಿತ ವಿವಿಧ ರಾಷ್ಟ್ರಗಳ ಮುನ್ನೂರಕ್ಕಿಂತಲೂ ಅಧಿಕ ಅಕ್ರಮ ವಲಸಿಗರನ್ನು ಬಂಧನ ಕೇಂದ್ರಕ್ಕೆ ಕಳಿಸಿದ ಅಮೆರಿಕ

21/02/2025


Provided by

ಭಾರತೀಯರು ಸಹಿತ ವಿವಿಧ ರಾಷ್ಟ್ರಗಳ ಮುನ್ನೂರಕ್ಕಿಂತಲೂ ಅಧಿಕ ಅಕ್ರಮ ವಲಸಿಗರನ್ನು ಅಮೆರಿಕ ಪನಾಮದ ಬಂಧನ ಕೇಂದ್ರಕ್ಕೆ ರವಾನಿಸಿದೆ. ಭಾರತ ಇರಾನ್ ನೇಪಾಳ ಶ್ರೀಲಂಕಾ ಪಾಕಿಸ್ತಾನ ಅಘಾನಿಸ್ತಾನ ಚೀನಾ ಮುಂತಾದ ರಾಷ್ಟ್ರಗಳ ಅಕ್ರಮ ವಲಸಿಗರು ಇವರಲ್ಲಿ ಸೇರಿದ್ದು, ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದಾರೆ.


Provided by

ದಯವಿಟ್ಟು ನಮ್ಮನ್ನು ರಕ್ಷಿಸಿ. ನಮ್ಮ ರಾಷ್ಟ್ರದಲ್ಲಿ ನಾವು ಸುರಕ್ಷಿತರಲ್ಲ ಎಂದು ಅವರು ತಮ್ಮ ಬಂಧನ ಕೇಂದ್ರದಿಂದ ಮನವಿ ಮಾಡಿದ್ದಾರೆ. ಹಾಗೆ ಬರೆದ ಪ್ಲ ಕಾರ್ಡ್ ಅನ್ನು ಅವರು ಪ್ರದರ್ಶಿಸಿದ್ದಾರೆ.

ಈಗಾಗಲೇ ಹೀಗೆ ಅಕ್ರಮ ವಲಸಿಗರನ್ನು ಆಯಾ ರಾಷ್ಟ್ರಕ್ಕೆ ಕಳುಹಿಸುವ ಮೊದಲು ಅವರ ಕೈಕಾಲುಗಳಿಗೆ ಬೇಡಿ ತೊಡಿಸಿದ ದೃಶ್ಯವನ್ನು ಅಮೆರಿಕ ಬಿಡುಗಡೆಗೊಳಿಸಿತ್ತು. ಭಾರತದಲ್ಲಿ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕವೂ ಅಮೆರಿಕ ತನ್ನ ನೀತಿಯನ್ನು ಬದಲಿಸಿಲ್ಲ. ತನಗೆ ಸರಿ ಕಂಡಂತೆ ತಾನು ನಡಕೊಳ್ಳುವೆ ಎಂಬ ಉಡಾಫೆ ಧೋರಣೆಯೊಂದಿಗೆ ಅಮೆರಿಕ ತನ್ನಲ್ಲಿನ ಅಕ್ರಮ ವಲಸಿಗರ ಜೊತೆ ವರ್ತಿಸುತ್ತಿದೆ. ಇದೀಗ ಈ ಅಕ್ರಮ ವಲಸಿಗರನ್ನು ಅವರವರ ನಾಡಿಗೆ ಕಳುಹಿಸುವ ವರೆಗೆ ಪನಾಮದ ಬಂಧನ ಕೇಂದ್ರಕ್ಕೆ ಕಳುಹಿಸಿಕೊಟ್ಟದ್ದು ಮತ್ತು ರಕ್ಷಣೆಗಾಗಿ ಅವರು ಕೋರಿದ್ದು ಬಾರಿ ಚರ್ಚೆಗೆ ಒಳಗಾಗಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ