ಮದರಸಗಳಲ್ಲಿ ಉಗ್ರರನ್ನು ಬೆಳೆಸಲಾಗುತ್ತಿದೆ | ಸಚಿವೆಯಿಂದ ವಿವಾದಾತ್ಮಕ ಹೇಳಿಕೆ - Mahanayaka

ಮದರಸಗಳಲ್ಲಿ ಉಗ್ರರನ್ನು ಬೆಳೆಸಲಾಗುತ್ತಿದೆ | ಸಚಿವೆಯಿಂದ ವಿವಾದಾತ್ಮಕ ಹೇಳಿಕೆ

21/10/2020

ಭೋಪಾಲ್: ಎಲ್ಲ ಉಗ್ರರನ್ನು ಮದರಸಗಳಲ್ಲಿಯೇ ಬೆಳೆಸಲಾಗುತ್ತದೆ ಎಂದು ಮಧ್ಯಪ್ರದೇಶದ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮದರಸದಲ್ಲಿ ರಾಷ್ಟ್ರೀಯತೆ ಕಲಿಸುವುದಿಲ್ಲ ಎಂದು ಹೇಳಿದ್ದಾರೆ.

ಎಲ್ಲ ಭಯೋತ್ಪಾದಕರನ್ನು ಮದರಸಗಳಲ್ಲಿಯೇ ಬೆಳೆಸಲಾಗುತ್ತದೆ. ಜಮ್ಮು-ಕಾಶ್ಮೀರವನ್ನು ಅವರು ಭಯೋತ್ಪಾದಕರ ಕಾರ್ಖಾನೆ ಮಾಡಿದ್ದಾರೆ.  ಸಮಾಜದ ಪ್ರಗತಿಗಾಗಿ ಮದರಸಗಳನ್ನು ದೇಶದ ಶಿಕ್ಷಣ ಸಂಸ್ಥೆಗಳೊಳಗೆ ವಿಲೀನ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಅಸ್ಸಾಂ ಸರ್ಕಾರವು ಮದರಸಗಳನ್ನು ಮುಚ್ಚುವ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಇದನ್ನು ಬೆಂಬಲಿಸಿ ಮಾತನಾಡಿರುವ ಉಷಾ ಠಾಕೂರ್, ಮದರಸಗಳ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಅಸ್ಸಾಂ ಸರ್ಕಾರವು ಸರ್ಕಾರಿ ಮದರಸ ಹಾಗೂ ಸಂಸ್ಕೃತ ಶಾಲೆಗಳನ್ನೂ ಮುಚ್ಚಲು ಪ್ರಕಟಣೆ ಹೊರಡಿಸಿತ್ತು.  ಸರ್ಕಾರವು ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣ ನೀಡುವುದಿಲ್ಲ ಎಂದು ಅದು ಹೇಳಿತ್ತು. ಆದರೆ ಉಷಾ ಠಾಕೂರ್ ಮದರಸಗಳ ಬಗ್ಗೆ ಮಾತ್ರವೇ ಮಾತನಾಡಿದ್ದಾರೆ. ಅಲ್ಲದೇ, ಆಧಾರ ರಹಿತ ಮಾತುಗಳನ್ನಾಡಿದ್ದಾರೆ ಎಂಬ ಆಕ್ರೋಶಗಳು ಸದ್ಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ