ವಿಮಾನದಲ್ಲಿ ಮಾಸ್ಕ್ ಧರಿಸಿ ಎಂದಾಗ ಆ ಮಹಿಳೆ ಮಾಡಿದ್ದೇನು? | ಎಲ್ಲರೂ ಶಾಕ್! - Mahanayaka
2:18 PM Thursday 12 - September 2024

ವಿಮಾನದಲ್ಲಿ ಮಾಸ್ಕ್ ಧರಿಸಿ ಎಂದಾಗ ಆ ಮಹಿಳೆ ಮಾಡಿದ್ದೇನು? | ಎಲ್ಲರೂ ಶಾಕ್!

21/10/2020

ವಿಮಾನದ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಹೇಳಿದ ಸಂದರ್ಭ ಸಿಟ್ಟಾದ ಮಹಿಳೆಯೊಬ್ಬರು ರಾದ್ಧಾಂತ ನಡೆಸಿದ ಘಟನೆ ನಡೆದಿದ್ದು, ಎಲ್ಲರೂ ಒಂದು ದಿನ ಸಾಯಬೇಕು, ಮತ್ತೆ ಯಾಕೆ ಈ ಮಾಸ್ಕ್ ಎಲ್ಲ ಎಂದು ಜೋರಾಗಿ ಕೂಗಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಫೇಸ್ ಮಾಸ್ಕ್ ಧರಿಸಲು ನಿರಾಕರಿಸಿದ ಮಹಿಳೆ ಸಿಬ್ಬಂದಿಗೆ ಬೈದು ವಿಮಾನದಿಂದ ಹೊರ ನಡೆದಿದ್ದಾಳೆ.

ಅಕ್ಟೋಬರ್ 18ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಲ್​ ಫಾಸ್ಟ್​ನಿಂದ ಎಡಿನ್ ​ಬರ್ಗ್​ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಮಾಸ್ಕ್ ಧರಿಸದೇ ಪ್ರಯಾಣಿಸುವಂತಿಲ್ಲ ಎಂದು ಕೊನೆಗೂ ಸಿಬ್ಬಂದಿ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.


Provided by

ಇನ್ನೂ ಮಹಿಳೆಯ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರ ಜೀವನವೂ ಒಂದು ದಿನ ಕೊನೆಯಾಗುತ್ತದೆ ಎನ್ನುವ ಮಹಿಳೆಯ ಮಾತಿಗೆ ಕೆಲವರು ಹೌದು ಎಂದು ಹೇಳಿದ್ದರೆ, ಇನ್ನೊಂದೆಡೆಯಲ್ಲಿ ಇದು ದುರ್ಬುದ್ಧಿಯ ನಡಯತೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಈ ವಿಡಿಯೋ ಟ್ವಿಟ್ಟರ್ ನಲ್ಲಿ ಹೆಚ್ಚು ವೈರಲ್ ಆಗಿದೆ.

ವಿಡಿಯೋ ನೋಡಿ:

https://youtu.be/6tqeVotRD_M

ಇತ್ತೀಚಿನ ಸುದ್ದಿ