ಭೀಕರ ಅಪಘಾತ | ಐವರು ಸ್ಥಳದಲ್ಲೇ ಸಾವು | 34 ಜನರಿಗೆ ತೀವ್ರ ಸ್ವರೂಪದ ಗಾಯ - Mahanayaka
5:47 AM Thursday 7 - December 2023

ಭೀಕರ ಅಪಘಾತ | ಐವರು ಸ್ಥಳದಲ್ಲೇ ಸಾವು | 34 ಜನರಿಗೆ ತೀವ್ರ ಸ್ವರೂಪದ ಗಾಯ

21/10/2020

ಮಹಾರಾಷ್ಟ್ರ: ಭೀಕರ ಬಸ್ ಅಪಘಾತವೊಂದರಲ್ಲಿ 5 ಜನರು ದಾರುಣವಾಗಿ ಮೃತಪಟ್ಟು, 34ಕ್ಕೂ ಅಧಿಕ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ವಿಸರ್ವಾಡಿ ಸಮೀಪದ ಕೊಂಡೈವಾಡಿ ಘಾಟ್ ಬಳಿಯಲ್ಲಿ ನಡೆದಿದೆ.

ಮಲ್ಕಾಪುರದಿಂದ ಸೂರತ್ ಗೆ ಪ್ರಯಾಣಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಇದರ ಪರಿಣಾಮವಾಗಿ ಬಸ್ ನ ಚಾಲಕ, ಕ್ಲೀನರ್ ಸೇರಿದಂತೆ ಒಟ್ಟು 5 ಜನರು ಮೃತಪಟ್ಟಿದ್ದಾರೆ.

34 ಗಾಯಾಳುಗಳ ಪೈಕಿ 31 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ  ನಂದರ್ಬಾರ್ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ಘಟನಾ ಸ್ಥಳಕ್ಕೆ  ಪೊಲೀಸ್ ಅಧಿಕಾರಿಗಳು ಹಾಗೂ ಇತರ ತುರ್ತು ಸಿಬ್ಬಂದಿ ಆಗಮಿಸಿ ನೆರವು ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ