ವಾಹನ ಮಾಲಕರಿಗೆ ಬಿಗ್ ಶಾಕ್ | 15 ವರ್ಷಗಳಿಗಿಂತಲೂ ಹಳೆಯ ವಾಹನಗಳನ್ನು  ಗುಜಿರಿಗೆ ಹಾಕಲು ಸೂಚನೆ - Mahanayaka

ವಾಹನ ಮಾಲಕರಿಗೆ ಬಿಗ್ ಶಾಕ್ | 15 ವರ್ಷಗಳಿಗಿಂತಲೂ ಹಳೆಯ ವಾಹನಗಳನ್ನು  ಗುಜಿರಿಗೆ ಹಾಕಲು ಸೂಚನೆ

01/02/2021


Provided by

ನವದೆಹಲಿ: 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತೆ ಬಜೆಟ್ ನಲ್ಲಿ ಸೂಚನೆ ನೀಡಲಾಗಿದ್ದು, ಹಳೆಯ ವಾಹನವನ್ನು ಬಳಕೆ ಮಾಡುತ್ತಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.

ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ 15 ವರ್ಷಕ್ಕಿಂತಲೂ ಹಳೆಯ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ವಾಹನಗಳನ್ನು ಗುಜರಿಗೆ ಹಾಕುವಂತೆ  ಸೂಚನೆ ನೀಡಲಾಗಿದೆ. ಹಳೆಯ ವಾಹನ ಸವಾರರಿಗೆ ಗ್ರೀನ್ ಟ್ಯಾಕ್ಸ್ ತೆರಿಗೆಯನ್ನು ಪರಿಚಯಿಸುವ ಮೂಲಕ ಶಾಕ್ ನೀಡಿದ್ದ ಸರ್ಕಾರ ಇದೀಗ ಹಳೆಯ ವಾಹನಗಳನ್ನು ಗುಜಿರಿಗೆ ಹಾಕಲು ಹೇಳಿದೆ.

ಇಂದು ಮಂಡನೆಯಾದಂತ ಕೇಂದ್ರ ಬಜೆಟ್ ವೇಳೆಯಲ್ಲಿ 15 ವರ್ಷದ ಹಳೆಯ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಗುಜರಿಗೆ ವಾಹನ ಸವಾರರೇ ಹಾಕುವಂತ ಯೋಜನೆಯನ್ನು ಪರಿಚಯಿಸಿದೆ. ಈ ಮೂಲಕ ವಾಹನ ಸವಾರರೇ ಹಳೆಯ ವಾಹನಗಳನ್ನು ಗುಜರಿಗೆ ಸ್ವಯಂ ಪ್ರೇರಿತವಾಗಿ ಹಾಕುವಂತೆ ಪ್ರೋತ್ಸಾಹಿಸಿದೆ.

ಇತ್ತೀಚಿನ ಸುದ್ದಿ