ತಮಿಳುನಾಡು, ಅಸ್ಸಾಂ , ಪ.ಬಂಗಾಳಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು | ಬಜೆಟ್ ಮಂಡಿಸುತ್ತಿರುವಾಗ ನಕ್ಕ ನಿರ್ಮಲಾ ಸೀತಾರಾಮನ್ - Mahanayaka

ತಮಿಳುನಾಡು, ಅಸ್ಸಾಂ , ಪ.ಬಂಗಾಳಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು | ಬಜೆಟ್ ಮಂಡಿಸುತ್ತಿರುವಾಗ ನಕ್ಕ ನಿರ್ಮಲಾ ಸೀತಾರಾಮನ್

01/02/2021

ನವದೆಹಲಿ:  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು, ಇದೇ ಸಂದರ್ಭದಲ್ಲಿ ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ.

ಆದಾಯದ ಮೂಲಗಳು ಕಡಿಮೆಯಾಗಿದ್ದರೂ ಈ ವರ್ಷ 5.54 ಕೋಟಿಯಷ್ಟು ಮೊತ್ತದ ಬಂಡವಾಳ ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ. ದೇಶದ ಪ್ರಗತಿ, ಮೂಲ ಸೌಕರ್ಯ ಅಭಿವೃದ್ಧಿ ಪ್ರಯತ್ನಗಳಿಗೆ ಹಿನ್ನಡೆಯಾಗದಂತೆ ಎಚ್ಚರ ವಹಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 95 ಸಾವಿರ ಕೋಟಿ ವೆಚ್ಚದಲ್ಲಿ 675 ಕಿ.ಮೀ. ಕಾಮಗಾರಿ ನಡೆಯಲಿದೆ.  ಕೊಲ್ಕತ್ತಾ-ಸಿಲಿಗುರಿ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವು ಕಾಮಗಾರಿಗಳು ಇದರಲ್ಲಿ ಸೇರಿವೆ ಎಂದು ಹೇಳಿದರು. ಈ ಘೋಷಣೆಯನ್ನು  ಮಾಡುವಾಗ ನಿರ್ಮಲಾ ಸೀತಾರಾಮನ್ ಸೈಲೆಂಟಾಗಿ ನಕ್ಕರು, ಪ್ರಧಾನಿ ಮೋದಿ ಹಾಗೂ ಇತರ ಸಚಿವರು ಮತ್ತು ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಕೇಳಿ ಬಂತು.

ದೇಶದ ವಿವಿಧೆಡೆಗಳಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅನುದಾನ ಘೋಷಿಸಿದ ವಿತ್ತ ಸಚಿವೆ, 11 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿಯಿದ್ದು,  ತಮಿಳುನಾಡಿನಲ್ಲಿ 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಮುಂದಿನ ವರ್ಷದಿಂದಲೇ ಮಾಡಲಾಗುವುದು. ಕೇರಳದಲ್ಲಿ 1,100 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 55 ಸಾವಿರ ಕೋಟಿ ರೂಪಾಯಿ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿ