ವಿಚ್ಛೇದನ ನೀಡಿಲ್ಲವೆಂದು ಪ್ರೀತಿಸಿ ಮದುವೆಯಾದವಳನ್ನೇ ಕೊಲೆಗೈದ ಪತಿ - Mahanayaka
12:37 AM Thursday 16 - October 2025

ವಿಚ್ಛೇದನ ನೀಡಿಲ್ಲವೆಂದು ಪ್ರೀತಿಸಿ ಮದುವೆಯಾದವಳನ್ನೇ ಕೊಲೆಗೈದ ಪತಿ

shri kakulam
07/02/2022

ಆಂಧ್ರಪ್ರದೇಶ: ಪ್ರೀತಿಸಿ ಮದುವೆಯಾದವಳನ್ನೇ ಸುಟ್ಟು ಕೊಲೆ ಮಾಡಿ, ಆಕೆ ಕಾಣೆಯಾಗಿದ್ದಾಳೆ ಎಂದು ಅಳುತ್ತಾ ಠಾಣೆಯಲ್ಲಿ ದೂರು ನೀಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.


Provided by

ಆಂಧ್ರಪ್ರದೇಶದ ವಿಜಯನಗರಂದ ಕೊತ್ತವಲಸ್​ ಮಂಡಲದ ಜೋಡಿಮೇರಕದಲ್ಲಿ ಈ ಘಟನೆ ನಡೆದಿದೆ. ಎಂಟು ವರ್ಷಗಳ ಹಿಂದೆ ಶ್ರೀಕಾಕುಳಂ ಜಿಲ್ಲೆಯ ಲಕ್ಷ್ಮೀ ಜೊತೆ ನಾಗರಾಜ್​ ಪ್ರೇಮ ವಿವಾಹವಾಗಿದ್ದ. ಈ ದಂಪತಿಗೆ ಒಬ್ಬ ಮಗು ಕೂಡ ಇದೆ. ಆದರೆ ಈ ವೇಳೆಗಾಗಲೇ ನಾಗರಾಜ್‌ ಇನ್ನೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ್ದಾನೆ. ಅದಕ್ಕಾಗಿ ವಿಚ್ಛೇದನ ನೀಡುವಂತೆ ಪತ್ನಿಗೆ ಹಿಂಸಿಸುತ್ತಿದ್ದ. ಆದರೆ ಆಕೆ ಒಪ್ಪಿಗೆ ನೀಡದ ಕಾರಣ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ನಂತರ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲು ಮಾಡಿದ್ದಾನೆ. ಅಳುತ್ತಾ ಠಾಣೆಗೆ ಹೋಗಿದ್ದ ಆರೋಪಿ ತನ್ನ ಹೆಂಡತಿ ಕೆಲ ದಿನಗಳಿಂದ ಕಾಣುತ್ತಿಲ್ಲ. ದಯವಿಟ್ಟು ಹುಡುಕಿಕೊಡಿ ಎಂದಿದ್ದಾನೆ.

ಈತನ ನಾಟಕವನ್ನು ಮೊದಲು ಪೊಲೀಸರು ನಿಜ ಎಂದು ನಂಬಿದ್ದರು. ಆದರೆ ತನಿಖೆ ವೇಳೆ ಆರೋಪಿ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ತಾನು ಕೊಲೆ ಮಾಡಿದ್ದು ಹಾಗೂ ಅದರ ಉದ್ದೇಶವನ್ನು ಈತ ಬಾಯಿ ಬಿಟ್ಟಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬ್ರಾಹ್ಮಣ ಅನ್ನೋದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನ: ಬಿಜೆಪಿ ಹಿರಿಯ ನಾಯಕ ದಿನೇಶ್ ಶರ್ಮಾ

ಹಿರಿಯ ನಟ ಅಶ್ವತ್ಥ್​ ನಾರಾಯಣ್​ ಇನ್ನಿಲ್ಲ

ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ

ಅಣ್ಣ ಹೇಳಿದಂತೆ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನ

ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ!: ಬೀದಿ ರಾಜಕೀಯ ಕ್ಯಾಂಪಸ್ ನೊಳಗೆ ನುಸುಳಿದ್ದು ಹೇಗೆ?

 

ಇತ್ತೀಚಿನ ಸುದ್ದಿ