ಬಾಂಗ್ಲಾದೇಶದಂತೆ ಭಾರತದಲ್ಲೂ ಪ್ರತಿಭಟನೆ ನಡೆಯಬಹುದು: ಸಲ್ಮಾನ್ ಕುರ್ಶಿದ್ ಬಿಚ್ಚಿಟ್ರು ಸ್ಫೋಟಕ ಮಾಹಿತಿ
ಹೊರಗಿನಿಂದ ನೋಡಿದರೆ ಬಾಂಗ್ಲಾದೇಶದಲ್ಲಿ ಎಲ್ಲವೂ ಸಹಜವಾಗಿ ಕಾಣಿಸುತ್ತಿತ್ತು. ಆದರೆ ದಿಢೀರನೆ ಸರಕಾರಿ ವಿರೋಧಿ ಪ್ರತಿಭಟನೆಗಳು ನಡೆದವು. ಇದಕ್ಕೆ ಸಮಾನವಾದ ಪ್ರತಿಭಟನೆ ಭಾರತದಲ್ಲೂ ನಡೆಯಬಹುದು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಕುರ್ಶಿದ್ ಹೇಳಿದ್ದಾರೆ. ಶಿಕ್ಷಣ ತಜ್ಞ ಮುಜಿಬುರ್ ರಹ್ಮಾನ್ ಅವರ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಉದ್ದೇಶಿಸಿ ಮಾತಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ಬಾಹ್ಯ ನೋಟಕ್ಕೆ ಕಾಶ್ಮೀರ ಕೂಡ ಸಹಜವಾಗಿರುವಂತೆ ಕಾಣುತ್ತಿದೆ. ಆದರೆ ಆಂತರಿಕವಾಗಿ ಹಾಗಿರುವುದಿಲ್ಲ. ಬಾಂಗ್ಲಾದೇಶದಲ್ಲಿ ಏನು ನಡೆದಿದೆಯೋ ಅದು ಭಾರತದಲ್ಲೂ ಸಂಭವನೀಯವಾಗಿದೆ ಎಂದವರು ಹೇಳಿದ್ದಾರೆ.
ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಜನತಾದಳದ ಸಂಸದ ಮನೋಜ್ ಝಾ ಅವರು ತಮ್ಮ ಮಾತಿನ ನಡುವೆ ಶಾಹಿನ್ ಭಾಗ್ ಪ್ರತಿಭಟನೆಯನ್ನು ಉಲ್ಲೇಖಿಸಿದ್ದಾರೆ.ಪಾರ್ಲಿಮೆಂಟ್ ಪರಾಜಯ ಹೊಂದಿದಾಗ ಬೀದಿಗೆ ಜನರು ಇಳಿಯುತ್ತಾರೆ. ನೂರು ದಿನಗಳ ಕಾಲ ಷಾಹೀನ್ ಭಾಗ್ ಪ್ರತಿಭಟನೆ ನಡೆದಿತ್ತು ಮತ್ತು ಮಹಿಳೆಯರೇ ಅದನ್ನು ಮುನ್ನಡೆಸಿದ್ದರು. ಸಿ ಎ ಎ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿರುವುದು ಕೂಡ ಇಲ್ಲಿ ಸ್ಮರಣೀಯ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth