ವಯನಾಡು: ಸೂಚಿಪ್ಪಾರ ಫಾಲ್ಸ್’ನಲ್ಲಿ 11 ಮೃತದೇಹಗಳು ಪತ್ತೆ

04/08/2024
ವಯನಾಡು: ಭೀಕರ ಭೂಕುಸಿತದಿಂದಾಗಿ ವಯನಾಡಿನಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಸಾವಿನ ಸಂಖ್ಯೆ ಒಟ್ಟು 350 ದಾಟಿದೆ.
6ನೇ ದಿನವಾದ ಭಾನುವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಕೇರಳದ ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಮೃತದೇಹಗಳು ಪತ್ತೆಯಾಗಿವೆ. ಘಟನೆ ನಡೆದ ಮುಂಡಕ್ಕೈ ಹಾಗೂ ಚೂರುಲ್ಮಲದಿಂದ 5 ಕಿಮೀ ದೂರದಲ್ಲಿ ಈ ಫಾಲ್ಸ್ ಇದೆ.
ಇನ್ನೂ ದುರಂತ ಸ್ಥಳದಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚಲು ಡಿಕ್ಸಿ ಹೆಸರಿನ ಶ್ವಾನ ಸಹಕಾರಿಯಾಗಿದೆ. ಈವರೆಗೆ 30 ಮೃತದೇಹಗಳನ್ನು ಡಿಕ್ಸಿ ಪತ್ತೆ ಹಚ್ಚಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: