ವಯನಾಡ್:  ಮನೆಯೊಡತಿಯನ್ನು ಕಂಡು ಓಡೋಡಿ ಬಂದ ನಾಯಿ - Mahanayaka

ವಯನಾಡ್:  ಮನೆಯೊಡತಿಯನ್ನು ಕಂಡು ಓಡೋಡಿ ಬಂದ ನಾಯಿ

wayanad
05/08/2024

ತಿರುವನಂತಪುರಂ: ಕೇರಳದ ವಯನಾಡಿನ ಮುಂಡಕ್ಕೈ, ಚೂರಲ್ಮಲದಲ್ಲಿ ನಡೆದ ಭೂಕುಸಿತ(ಪರ್ವತ ಪ್ರವಾಹ)ದಲ್ಲಿ ಸಾವಿಗೀಡಾದವರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಈ ನಡುವೆ ಮನಕಲಕುವ ಹಲವು ಘಟನೆಗಳು ಈ ಪ್ರದೇಶದಲ್ಲಿ ಪ್ರತಿ ದಿನ ನಡೆಯುತ್ತಲೇ ಇದೆ.


Provided by

ಕಳೆದ 6 ದಿನಗಳಿಂದ ದುರಂತ ಸ್ಥಳದಲ್ಲಿ ತನ್ನ ಮನೆಯವರನ್ನು ಹುಡುಕಾಡುತ್ತಿದ್ದ ನಾಯಿಯೊಂದು ಇದೀಗ ತನ್ನ ಒಡತಿಯನ್ನು ಕಂಡು ಆನಂದದಿಂದ ಕುಣಿದಾಡಿದೆ. ಕಳೆದ ಹಲವು ದಿನಗಳಿಂದಲೂ ದುರಂತ ಸ್ಥಳದಲ್ಲಿ ತನ್ನ ಮನೆಯವರನ್ನು ಈ ನಾಯಿ ಹುಡುಕಾಡುತ್ತಿತ್ತು. ಕಟ್ಟಡಗಳ ಅವಶೇಷಗಳಡಿಗಳಲ್ಲಿ ನಾಯಿ ತನ್ನವರನ್ನು ಹುಡುಕುತ್ತಿತ್ತು. ದುಃಖದಿಂದ ಊಳಿಡುತ್ತಿತ್ತು. ಆದರೆ ಇಷ್ಟು ದಿನ ಕಾಣದೇ ಇದ್ದ ಮನೆಯೊಡತಿಯನ್ನು ಏಕಾಏಕಿ ಕಂಡು ನಾಯಿ ಖುಷಿಯಲ್ಲಿ ಓಡಿ ಬಂದು ಮನೆಯೊಡತಿಯನ್ನು ತಬ್ಬಿಕೊಂಡಿದೆ.

ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ಇನ್ನೂ ಕಣ್ಮರೆಯಾಗಿದ್ದಾರೆ. ಸೂಚಿಪ್ಪಾರ ಫಾಲ್ಸ್ ವೊಂದರಲ್ಲೇ 11 ಮೃತದೇಹಗಳು ಸಿಕ್ಕಿವೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿ ಬಂದಿವೆ.

ಮುಂಡಕ್ಕೈನಲ್ಲಿ 540 ಮನೆಗಳು, ಚೂರಲ್ಮಲದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ಸೇರಿದಂತೆ ಒಟ್ಟು 1,208 ಮನೆಗಳು ಪರ್ವತ ಪ್ರವಾಹದಿಂದಾಗಿ ಹಾನಿಗೀಡಾಗಿದೆ.


Provided by

ಕಳ್ಳರ ಹಾವಳಿ:

ಭೂಕುಸಿತ ಸ್ಥಳದಲ್ಲಿ ಕಳ್ಳರ ಹಾವಳಿ ಆರಂಭವಾಗಿದ್ದು, ಪ್ರವಾಹದಿಂದ ನೆಲಸಮವಾಗಿದ್ದ ಮನೆಗಳಿಗೆ ಹೊಕ್ಕು ಕಳ್ಳರು ದೋಚುತ್ತಿದ್ದಾರೆ ಎಂದು ನಿರಾಶ್ರಿತರು ಆತಂಕ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ತಂಡದೊಂದಿಗೆ ಕಳ್ಳರು ಕೂಡ ನುಗ್ಗುತ್ತಿದ್ದಾರೆ. ಅವರು ಕೈಗೆ ಸಿಕ್ಕ ವಸ್ತುಗಳನ್ನು ದೋಚಿ ಸ್ಥಳದಿಂದ ಪರಾರಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ವ ಧರ್ಮ ಪ್ರಾರ್ಥನೆ ಮೂಲಕ ಅಂತ್ಯಸಂಸ್ಕಾರ:

ಸಾಕಷ್ಟು ಮೃತದೇಹಗಳು ಗುರುತು ಪತ್ತೆಯಾಗದ ಕಾರಣ, ಅವರನ್ನು ಯಾವ ಧರ್ಮದ ಸಂಪ್ರದಾಯದ ಮೂಲಕ ಅಂತ್ಯಕ್ರಿಯೆ ಮಾಡಬೇಕು ಎನ್ನುವುದು ಗೊಂದಲವಾಗಿತ್ತು. ಹಾಗಾಗಿ ಸರ್ವ ಧರ್ಮ ಪ್ರಾರ್ಥನೆ ಮೂಲಕ ಅಂತ್ಯ ಕ್ರಿಯೆ ನಡೆಸಲಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ