ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯದ ಕುಣಿತ: ಪ್ರಿಯಾಂಕಾ ಗಾಂಧಿ ಆತಂಕ - Mahanayaka

ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯದ ಕುಣಿತ: ಪ್ರಿಯಾಂಕಾ ಗಾಂಧಿ ಆತಂಕ

14/11/2024

ದೆಹಲಿ ವಾಯುಮಾಲಿನ್ಯದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ವಯನಾಡ್‌ನಿಂದ ದೆಹಲಿಗೆ ಬಂದಿಳಿದಾಗ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದ ಅನುಭವವಾಯಿತು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ವರ್ಷವೂ ದಿಲ್ಲಿಯ ಮಾಲಿನ್ಯವು ಹದಗೆಡುತ್ತಲೇ ಸಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಸುಂದರವಾದ ಗಾಳಿ ಹಾಗೂ 35ರಷ್ಟು ವಾಯು ಗುಣಮಟ್ಟ ಸೂಚ್ಯಂಕ ಹೊಂದಿರುವ ವಯನಾಡ್ ನಿಂದ ದಿಲ್ಲಿಗೆ ಮರಳಿದಾಗ, ಗ್ಯಾಸ್ ಚೇಂಬರ್ ಅನ್ನು ಪ್ರವೇಶಿಸಿದಂತಾಯಿತು. ದಟ್ಟವಾಗಿ ಆವರಿಸಿಕೊಂಡಿರುವ ಹೊಗೆ, ಆಗಸದಿಂದ ನೋಡಿದಾಗ ಮತ್ತಷ್ಟು ಆಘಾತವಾಯಿತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯ ವಾಯು ಮಾಲಿನ್ಯವು ಪ್ರತಿ ವರ್ಷವೂ ಹದಗೆಡುತ್ತಲೇ ಸಾಗುತ್ತಿದೆ. ನಾವೆಲ್ಲರೂ ಒಟ್ಟಾಗಿ ಕುಳಿತು, ಶುಭ್ರ ಗಾಳಿಗೆ ಒಂದು ಪರಿಹಾರವನ್ನು ಹುಡುಕಲೇಬೇಕಿದೆ. ಇದು ಪಕ್ಷಾತೀತ ವಿಚಾರವಾಗಿದ್ದು, ಮಕ್ಕಳು, ವೃದ್ಧರು ಹಾಗೂ ಉಸಿರಾಟದ ತೊಂದರೆ ಇರುವವರು ಅಕ್ಷರಶಃ ಉಸಿರಾಡಲು ಅಸಾಧ್ಯವಾಗಿದೆ. ಈ ಸಮಸ್ಯೆ ಕುರಿತು ನಾವೇನಾದರೂ ಮಾಡಲೇಬೇಕಿದೆ” ಎಂದೂ ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ